ನ್ಯೂಸ್ ನಾಟೌಟ್: ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿರುವ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 5 ಮತ್ತು 8ನೇ ತರಗತಿಗಳಿಗೆ ಮಾ.27ರಿಂದ ನಡೆಯಲಿರುವ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಬೇಕೆಂಬ ರಾಜ್ಯ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಮನವಿಯನ್ನು ಹೈಕೋರ್ಟ್ ಮತ್ತೊಮ್ಮೆ ತಿರಸ್ಕರಿಸಿದೆ.
ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ಹೊರಡಿಸಿದ್ದ ಸುತ್ತೋಲೆಗಳನ್ನು ರದ್ದುಪಡಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯು ನ್ಯಾಯಮೂರ್ತಿ ಜಿ. ನರೇಂದರ್ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠದ ಮುಂದೆ ಶುಕ್ರವಾರ (ಮಾರ್ಚ್ 24) ವಿಚಾರಣೆಗೆ ನಿಗದಿಯಾಗಿತ್ತು.
5 ಮತ್ತು 8ನೇ ತರಗತಿಗಳಿಗೆ ಮಾ.27 ರಂದು ಪರೀಕ್ಷೆ ನಡೆಸುವುದಕ್ಕೆ ರಾಜ್ಯ ಪ್ರಾರ್ಥಮಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳು ಮತ್ತು ಖಾಸಗಿ ಶಾಲೆಗಳ ಮಕ್ಕಳ ಪೋಷಕರು ಸಲ್ಲಿಸಿರುವ ಅರ್ಜಿಗಳು ಮಾ.27 ರಂದೇ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.
ಹೀಗಾಗಿ, ಪರೀಕ್ಷೆ ಮತ್ತು ವಿಚಾರಣೆ ಒಂದೇ ದಿನ ಇರುವುದರಿಂದ ಪರೀಕ್ಷೆಯನ್ನು ಮುಂದೂಡಬೇಕು ಎಂದು ಅರ್ಜಿದಾರರ ಪರ ವಕೀಲಾರಾದ ಕೆ.ವಿ.ಧನಂಜಯ್ ಅವರು ಪೀಠಕ್ಕೆ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣ ಪ್ರಸ್ತುತ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಆದ್ದರಿಂದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಅವಕಾಶವಿಲ್ಲ. ಸುಪ್ರೀಂಕೋರ್ಟ್ ಯಾವ ತೀರ್ಪು ನೀಡುತ್ತದೆಯೋ ಎಂಬುದನ್ನು ಕಾದು ನೋಡಬೇಕು. ನಿಮ್ಮ ಕೋರಿಕೆಯಂತೆ ಪರೀಕ್ಷೆಗಳನ್ನು ಮುಂದೂಡಲು ನಿರ್ದೇಶಿಸಲಾಗದು ಎಂದು ತಿಳಿಸಿತು.
ಮಾ. 27- ಪ್ರಥಮ ಭಾಷೆ ಕನ್ನಡ
ಇಂಗ್ಲೀಷ್
ಹಿಂದಿ
ಉರ್ದು
ಮರಾಠಿ
ತೆಲಗು
ತಮಿಳು
ಮಾ.28- ದ್ವಿತೀಯ ಭಾಷೆ ಇಂಗ್ಲೀಷ್
ಕನ್ನಡ
ಮಾ.29- ಪರಿಸರ ಅಧ್ಯಯನ
ಮಾ.30- ಗಣಿತ ವಿಷಯ (ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30)
ಮಾ. 27– ಪ್ರಥಮ ಭಾಷೆ ಕನ್ನಡ
ಇಂಗ್ಲೀಷ್
ಹಿಂದಿ
ಉರ್ದು
ಮರಾಠಿ
ತೆಲಗುತ
ಮಿಳು
ಸಂಸ್ಕೃತ
ಮಾ. 28- ದ್ವಿತೀಯ ಭಾಷೆ ಇಂಗ್ಲೀಷ್
ಕನ್ನಡ
ಮಾ.29- ತೃತೀಯ ಭಾಷೆ ಹಿಂದಿ ಹಿಂದಿ(ಎನ್ಸಿಇಆರ್ಟಿ)
ಕನ್ನಡ
ಇಂಗ್ಲೀಷ
ಅರೇಬಿಕ್
ಪರ್ಶಿಯನ್
ಉರ್ದು
ಸಂಸ್ಕೃತ
ಕೊಂಕಣಿ
ತುಳು
ಮಾ.30- ಗಣಿತ (ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30)
ಮಾ.31- ವಿಜ್ಞಾನ
ಏ.1- ಸಮಾಜ ವಿಜ್ಞಾನ
ಗಣಿತ ಹೊರತುಪಡಿಸಿ ಎಲ್ಲ ವಿಷಯಗಳ ಪರೀಕ್ಷೆ ಮಧ್ಯಾಹ್ನ 2.30ರಿಂದ ಸಂಜೆ 4.30ಕ್ಕೆ ನಡೆಯಲಿದೆ. ಪ್ರತಿ ವಿಷಯದ ಪರೀಕ್ಷೆ 40 ಅಂಕದ್ದಾಗಿರುತ್ತದೆ ಎಂದು ರಾಜ್ಯ ಶಿಕ್ಷಣ ಇಲಾಖೆ ತಿಳಿಸಿದೆ.