ನ್ಯೂಸ್ ನಾಟೌಟ್ : ವೃದ್ದೆಯೊಬ್ಬರು ಅರಣ್ಯದಲ್ಲೇ ಮೂರು ದಿನ ಕಳೆದು ಎಲೆಗಳನ್ನು ತಿಂದು ಬದುಕಿದ ಘಟನೆ ಕೌಕ್ರಾಡಿ ಗ್ರಾಮದ ಹೊಸಮಜಲು ಸಮೀಪದ ದೋಂತಿಲ ಎಂಬಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಅಜ್ಜಿ ನಾಪತ್ತೆಯಾಗಿದ್ದರು.ಎಷ್ಟೇ ಹುಡುಕಾಡಿದರೂ ಸಿಕ್ಕಿರಲಿಲ್ಲ. ಇದೀಗ ಅಜ್ಜಿ ಜೀವಂತವಾಗಿ ಮನೆ ಸೇರಿದ್ದು, ದೊಡ್ಡ ಪವಾಡವೇ ನಡೆದಂತಿದೆ.
ಫೆ.28ರಂದು ಸಂಜೆ ವೇಳೆಗೆ ವೃದ್ದೆ ನಾಪತ್ತೆಯಾಗಿದ್ದರು. ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ಸಮೀಪದ ದೋಂತಿಲ ನಿವಾಸಿ ಐಸಮ್ಮ (80ವ.) ನಾಪತ್ತೆಯಾದ ವೃದ್ದೆ.ಮಾ.3ರಂದು ಬೆಳಿಗ್ಗೆ ಮನೆಯಿಂದ ಸುಮಾರು 4 ಕಿ.ಮೀ.ದೂರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ತುಸು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಐಸಮ್ಮ ಅವರು ನಾಪತ್ತೆಯಾದ ಬಳಿಕ ಅವರ ಮಕ್ಕಳು, ಸಂಬಂಧಿಕರು ಹಾಗೂ ಊರವರು ತೀವ್ರ ಹುಡುಕಾಟ ನಡೆಸಿದ್ದರು.ಕಾಡು ಸೇರಿದ ಐಸಮ್ಮ ಅವರಿಗೆ ಮರಳಿ ಬರಲು ದಾರಿ ಕಾಣದೆ ಅಲ್ಲೆ ಬಾಕಿಯಾಗಿದ್ದರು ಎಂದು ತಿಳಿದು ಬಂದಿದೆ. ಕೊನೆಗೂ ಮಾಹಿತಿ ಪಡೆದ ಅವರ ಕುಟುಂಬಸ್ಥರು ಕಾಡಿನಿಂದ ಮನೆಗೆ ಕರೆ ತಂದಿದ್ದಾರೆ.