ನ್ಯೂಸ್ ನಾಟೌಟ್: ವೈದ್ಯರ ನಿರ್ಲಕ್ಷ್ಯದಿಂದ ಹಲವರಿಗೆ ಒಂದೇ ಸಿರಿಂಜ್ , ಸೂಚಿ ಬಳಕೆ ಮಾಡಿದ ಪರಿಣಾಮ ಬಾಲಕಿಯೊಬ್ಬಳಿಗೆ ಎಚ್ಐವಿ ತಗುಲಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಒಂದೇ ಸಿರಿಂಜ್ ನಿಂದ ಹಲವಾರು ಮಕ್ಕಳಿಗೆ ಚುಚ್ಚುಮದ್ದು ನೀಡಲಾಗಿದೆ ಎಂದು ಆಸ್ಪತ್ರೆಗೆ ದಾಖಲಾದ ಬಾಲಕಿಯ ಪೋಷಕರು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂಕಿತ್ ಕುಮಾರ್ ಅಗರ್ವಾಲ್ ಅವರಿಗೆ ಶನಿವಾರದಂದು ದೂರು ನೀಡಿದ್ದಾರೆ.
ಫೆಬ್ರವರಿ 20 ರಂದು ಆಸ್ಪತ್ರೆಗೆ ದಾಖಲಾದ ಬಾಲಕಿಯ ಸಂಬಂಧಿಕರು, ಮಗುವಿಗೆ ಎಚ್ಐವಿ ಪಾಸಿಟಿವ್ ಎಂದು ಪತ್ತೆಯಾದ ಬಳಿಕ ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಯಿಂದ ಮಗುವನ್ನು ಕಳುಹಿಸಿದರು. ಈ ಬಗ್ಗೆ ಪೋಷಕರು ವೈದ್ಯಾಧಿಕಾರಿಗಳ ಮೇಲೆ ದೂರಿದ್ದರು. ಇದಕ್ಕೆ ನೇರ ಹೊಣೆ ವೈದ್ಯರೇ ಎಂದು ಹೇಳಿದ್ದಾರೆ.ಒಂದೇ ಸಿರಿಂಜ್ ನಿಂದ ಹಲವಾರು ಮಕ್ಕಳಿಗೆ ಚುಚ್ಚುಮದ್ದು ನೀಡಿದ ಪರಿಣಾಮ ಮಗುವಿಗೆ ಎಚ್ಐವಿ ತಗುಲಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು “ಇಟಾಹ್ ನ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರು ಒಂದೇ ಸಿರಿಂಜ್ ನಿಂದ ಹಲವಾರು ರೋಗಿಗಳಿಗೆ ಚುಚ್ಚುಮದ್ದು ನೀಡಿ ಮಗುವಿನ ಪರೀಕ್ಷೆಯ ವರದಿ ಎಚ್ಐವಿ ಪಾಸಿಟಿವ್ ಬಂದಾಗ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಂದ ವಿವರಣೆ ಕೇಳಲಾಗಿದೆ. ಯಾವುದೇ ವೈದ್ಯರು ತಪ್ಪಿತಸ್ಥರು ಎಂದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸಾಮಾನ್ಯವಾಗಿ ಜನರು ಸೂಜಿ ಮರುಬಳಕೆ ಮಾಡುವ ಅಪಾಯದ ಬಗ್ಗೆ ಮಾತ್ರ ತಿಳಿದುಕೊಂಡಿರುತ್ತಾರೆ. ಅದರಲ್ಲೂ ಸಿರಿಂಜ್ ಅನ್ನು ಮರುಬಳಕೆ ಮಾಡುವುದು ಅಪಾಯಕಾರಿ ಎಂಬುದು ಕೆಲವೇ ಜನರಿಗೆ ತಿಳಿದಿರುವುದು. ವೈದ್ಯರು ಮತ್ತು ತಜ್ಞರ ಸೂಚನೆಯಂತೆ ಈಗಾಗಲೇ ಭಾರತದಲ್ಲಿ ಏಕ ಬಳಕೆಯ ಸಿರಿಂಜ್ ಮತ್ತು ಸೂಜಿ ಬಳಸಲು ಸೂಚನೆ ನೀಡಲಾಗಿದೆ.