ನ್ಯೂಸ್ ನಾಟೌಟ್ : ಕೇರಳದ ಕಲ್ಲೆಟ್ಟುಮಕರ ಇರಿಂಜದನಪಿಲ್ಲಿ ಶ್ರೀಕೃಷ್ಣ ದೇವಾಲಯದ ರಾಮನ್ ರೋಬೋಟಿಕ್ ಆನೆ ಬಗ್ಗೆ ಬಾರಿ ಸುದ್ದಿಯಾಗಿತ್ತು.ಆದರೆ ಇದು ಸಾಮಾನ್ಯ ಆನೆ ಅಲ್ಲ, ಇದನ್ನು ಇನ್ನು ಮುಂದೆ ದೇವಾಲಯದ ಉತ್ಸವಗಳಲ್ಲಿ ಬಳಸಲಾಗುತ್ತದೆ ಎಂದರೆ ಎಲ್ಲರೂ ಆಶ್ಚರ್ಯಪಡಬೇಕಾದ ವಿಚಾರ.
ಹೌದು,ಹೀಗಂತ ಕಲ್ಲೆತ್ತುಮಕರ ಇರಿಂಜದನಪಿಲ್ಲಿ ಶ್ರೀಕೃಷ್ಣ ದೇವಸ್ಥಾನ, ತ್ರಿಶೂರ್ ದೇವಸ್ಥಾನದ ಅಧ್ಯಕ್ಷ ರಾಜ್ಕುಮಾರ್ ಅವರು ತಿಳಿಸಿದ್ದಾರೆ.ಸುಮಾರು 11 ಅಡಿ ಎತ್ತರವಿರುವ ಈ ಆನೆ ಮೇಲೆ ನಾಲ್ಕು ಜನರು ಕುಳಿತು ಮೆರವಣಿಗೆಯನ್ನು ನಡೆಸಬಹುದು. ಇಲ್ಲಿನ ಆಚರಣೆಗೆ ಆನೆ ಪ್ರಮುಖವಾಗಿರುವುದರಿಂದ ಈ ತಂತ್ರವನ್ನು ಬಳಸಲಾಗಿದೆ. ಇಲ್ಲಿ ಜೀವಂತ ಆನೆಗಳನ್ನು ಬಳಸಬೇಕೆಂದೇನಿಲ್ಲ. ಆದರೆ ಇದು ಅಲಂಕಾರಿತ ಆನೆಯಾಗಿದೆ. ಇಲ್ಲಿನ ಆಚರಣೆಗೆ ಆನೆ ಪ್ರಮುಖವಾಗಿರುವುದರಿಂದ ಈ ತಂತ್ರವನ್ನು ಬಳಸಲಾಗಿದೆ.
ರಾಜರು ಆನೆಗಳನ್ನು ಆಡಂಬರಕ್ಕಾಗಿ ಮತ್ತು ತಮ್ಮ ಗೌರವಕ್ಕಾಗಿ ಬಳಸುತ್ತಿದ್ದರು. ಆದರೆ ಇತ್ತೀಚೆಗೆ ಆನೆಗಳಿಂದ ಉಂಟಾಗುವ ಅಪಘಾತಗಳ ಸಂಖ್ಯೆ ಹೆಚ್ಚು, ಆನೆಗಳನ್ನು ಬಾಡಿಗೆ ಪಡೆದರೆ ಬೆಲೆ ಕೂಡ ಹೆಚ್ಚು. ಈ ಕಾರಣಕ್ಕೆ ಈಗ ರೋಬೋಟಿಕ್ ಆನೆಗಳನ್ನು ಬಳಸಲಾಗಿದೆ ಇನ್ನು ಮುಂದಕ್ಕೆ ದೇವಾಲಯಗಳು ಜೀವಂತ ಆನೆಗಳನ್ನು ಬಳಸುವುದಿಲ್ಲ ಎಂದು ಎಂದು ದೇವಾಲಯದ ಅರ್ಚಕರು ಹೇಳಿದ್ದಾರೆ.
ಇದು ಸುರಕ್ಷಿತ ಮತ್ತು ಅತ್ಯಂತ ದುಬಾರಿ ಆನೆ. ಈ ರೋಬೋಟಿಕ್ ಆನೆ ತರುವ ಯೋಜನೆಯು ಈ ದೇವಾಲಯದ ಆಚರಣೆಗಳ ಮೂಲಭೂತ ಅಂಶ. ಹೀಗಾಗಿ ತಾಂತ್ರಿಕ ಆನೆಯನ್ನು ಇಲ್ಲಿಗೆ ತರಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.ದೇವರ ಮೆರವಣಿಗೆಯ ಭಾಗವಾಗಿ ಈ ಆನೆಗಳನ್ನು ಬಳಸಲಾಗುತ್ತದೆ. ಆನೆ ದೇವರ ವಾಹನ, ಆನೆಗಳನ್ನು ಮುಖ್ಯವಾಗಿ ದೇವರ ಕೆಲಸಕ್ಕೆ ಉಪಯೋಗಿಸಲಾಗುವುದು ಎಂದು ದೇವಾಲಯದ ಅರ್ಚಕರು ತಿಳಿಸಿದ್ದಾರೆ.