ನ್ಯೂಸ್ ನಾಟೌಟ್ : ಕುಲ್ತಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಪಖಿರಾಲಯ ಗ್ರಾಮದ ಮಸೀದಿಯಲ್ಲಿ ಇಫ್ತಾರ್ (ಉಪವಾಸ ಬಿಡುವ) ನಲ್ಲಿ ಆಹಾರವನ್ನು ಸೇವಿಸಿ ೧೦೦ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿರುವ ಘಟನೆ ವರದಿಯಾಗಿದೆ.ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.
ಕುಲ್ತಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಪಖಿರಾಲಯ ಗ್ರಾಮದ ಮಸೀದಿಯಲ್ಲಿ ಇಫ್ತಾರ್ (ಉಪವಾಸ ಬಿಡುವ) ನಲ್ಲಿ ಆಹಾರವನ್ನು ಸೇವಿಸಿದ ಬಳಿಕ ಅನೇಕರಿಗೆ ಹೊಟ್ಟೆ ನೋವು ಹಾಗೂ ವಾಂತಿಯಾಗಿದ್ದು,ನೂರಕ್ಕೂ ಅಧಿಕ ಮಂದಿ ನಾನಾ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.
ಕೆಲವು ಜನ ಉಪವಾಸ ಬಿಡುವ ವೇಳೆ ಆಹಾರ ಸೇವಿಸಿ ಕ್ಲಿನಿಕ್ ಗೆ ಬಂದಿದ್ದಾರೆ. ಹೊಟ್ಟೆ ನೋವು ಹಾಗೂ ವಾಂತಿ ಆಗುತ್ತಿದೆ ಎಂದು ಹೇಳಿದಾಗ ಪರೀಕ್ಷಿಸಿದೆ. ಬಳಿಕ ಇಫ್ತಿಯಾರ್ ಆಹಾರದಲ್ಲಿ ಫುಡ್ ಪಾಯ್ಸನ್ ಆಗಿರುವುದು ಗೊತ್ತಾಗಿದೆ ಎಂದು ಡಾ. ಹೊರಿಸಧನ್ ಮೊಂಡಲ್ ಹೇಳಿದ್ದಾರೆ.ಈ ಬಗ್ಗೆ ಅಸ್ವಸ್ಥಗೊಂಡಿರುವ ವ್ಯಕ್ತಿಯೊಬ್ಬರ ಪತ್ನಿ ನರೇಂದ್ರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.