ನ್ಯೂಸ್ ನಾಟೌಟ್: ಹೆಚ್ಚಿನವರು ಮೊಬೈಲನ್ನು ಚಾರ್ಜ್ಗೆ ಇಟ್ಟುಕೊಂಡೆ ಬಳಸುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ, ಇದ್ದರಿಂದ ಎಂತಹ ಅನಾಹುತವಾಗುತ್ತದೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಮಧ್ಯಪ್ರದೇಶದ 68 ವರ್ಷದ ದಯಾರಾಮ್ ಬಾರೋಡ ಎಂಬುವವರು ಮೊಬೈಲ್ ಚಾರ್ಜ್ಗೆ ಹಾಕಿ ಮಾತನಾಡುತ್ತಿರುವಾಗ ಸ್ಪೋಟಗೊಂಡು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಈ ಅವಘಢದಲ್ಲಿ ದಯಾರಾಮ್ ಪ್ರಾಣ ಕಳೆದುಕೊಂಡಿದ್ದಾರೆ. ಈ ಸ್ಫೋಟ ಎಷ್ಟು ಭಯಾನಕವಾಗಿತ್ತು ಎಂದರೆ, ದಯಾರಾಮ್ ತಲೆಯಿಂದ ಎದೆಯ ಭಾಗದವರೆಗೆ ದೇಹ ಛಿದ್ರ ಛಿದ್ರವಾಗಿದೆ. ಉಜ್ಜಯಿನಿಯಿಂದ 40 ಕಿಮೀ ದೂರದಲ್ಲಿರುವ ಬದ್ ನಗರದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.
ದಯಾರಾಮ್ ಬರೋದ್ ಅವರು ಮನೆಯಲ್ಲಿ ಚಾರ್ಜ್ ಆಗುತ್ತಿದ್ದ ವೇಳೆ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದರು ಈ ಕಾರಣದಿಂದ ಮೊಬೈಲ್ ಸ್ಪೋಟಗೊಂಡಿದೆ. ದಯಾರಾಮ್ ಅವರ ತಲೆಯಿಂದ ಎದೆವರೆಗೆ ದೇಹ ಸಂಪೂರ್ಣ ತುಂಡು ತುಂಡಾಗಿದ್ದು, ಪವರ್ ಪಾಯಿಂಟ್ ಕೂಡ ಸಂಪೂರ್ಣ ಸುಟ್ಟು ಕರಕಲಾಗಿದೆ.
ತನಿಖೆಯಲ್ಲಿ ಸ್ಥಳದಿಂದ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಒಂದು ಫೋನ್ ಮಾತ್ರ ಕೆಟ್ಟದಾಗಿ ಹಾಳಾಗಿರುವುದು ಕಂಡುಬಂದಿದೆ. ಪೊಲೀಸರು ಮೊಬೈಲ್ನ ತುಣುಕುಗಳನ್ನು ವಶಪಡಿಸಿಕೊಂಡು ತನಿಖೆಗೆ ಕಳುಹಿಸಿದ್ದಾರೆ. ಚಾರ್ಜಿಂಗ್ ನಲ್ಲಿ ಮೊಬೈಲ್ನೊಂದಿಗೆ ಮಾತನಾಡುತ್ತಿದ್ದ ವೇಳೆ ಮೊಬೈಲ್ ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.