ನ್ಯೂಸ್ ನಾಟೌಟ್: ಸುಳ್ಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗಣಿತ ಶಿಕ್ಷಕರಾಗಿದ್ದ ಜನಾರ್ದನ ಮಾಸ್ಟರ್ ನೆನಪಿನಲ್ಲಿ ಕಾಲೇಜಿನಲ್ಲಿ ಸ್ಥಾಪಿಸಿದ ಜನಾರ್ದನ ಮಾಸ್ಟರ್ ಗಣಿತ ಅಧ್ಯಯನ ಕೇಂದ್ರವನ್ನು ಬುಧವಾರ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಉದ್ಘಾಟಿಸಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ರಾಮಕುಂಜ ಶ್ರೀ ರಾಮಕುಂಜೇಶ್ವರ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಸತೀಶ್ ಭಟ್ ವಿಶೇಷ ಗಣಿತ ಉಪನ್ಯಾಸ ನೀಡಿದರು. ಶಿಕ್ಷಣ ಸಂಯೋಜಕಿ ನಳಿನಿ, ಜನಾರ್ದನ ಮಾಸ್ಟರ್ ಗಣಿತ ಅಧ್ಯಯನ ಕೇಂದ್ರದ ಅಧ್ಯಕ್ಷ ಎಂ.ಬಿ.ಸದಾಶಿವ, ಸಂಚಾಲಕರಾದ ಡಾ.ಎನ್.ಎ.ಜ್ಞಾನೇಶ್, ಕಾರ್ಯದರ್ಶಿ ಪ್ರಕಾಶ್ ಮೂಡಿತ್ತಾಯ ಪಿ., ಜತೆ ಕಾರ್ಯದರ್ಶಿ ಪುರುಷೋತ್ತಮ ಎಂ.ಎಸ್, ಕೋಶಾಧಿಕಾರಿ ರಾಮಚಂದ್ರ ಪಿ, ಸಂಯೋಜಕಿ ಪೂರ್ಣಿಮಾ ಮತ್ತಿತರರಿದ್ದರು. ಚಂದ್ರಮತಿ, ಪೂರ್ಣಿಮಾ, ಮಮತಾ ಕಾರ್ಯಕ್ರಮ ನಿರೂಪಿಸಿದರು.
ಕೇಂದ್ರದ ಉದ್ಘಾಟನೆಯ ಅಂಗವಾಗಿ ನಡೆದ ಗಣಿತ ಯಕ್ಷಗಾನ ತಾಳಮದ್ದಳೆ ‘ಸಂಖ್ಯಾ ಸಾಮರಸ್ಯ’ ವಿಶೇಷ ಗಮನ ಸೆಳೆಯಿತು. ಹಿಮ್ಮೇಳದಲ್ಲಿ ರಚನಾ ಚಿಡ್ಕಲ್, ಲಕ್ಷ್ಮೀಶ, ಶ್ರೀಕುಮಾರ ಸಹಕರಿಸಿದರು, ಮುಮ್ಮೇಳದಲ್ಲಿ ಶರತ್ ಕುಮಾರ್ ನಿಷ್ಠೆ, ಪರಮೇಶ್ವರ ಹೆಗಡೆ ಬಂಟ್ವಾಳ, ವೀಣಾ ಶ್ಯಾನುಭಾಗ್ ಉಜಿರೆ, ಪ್ರಕಾಶ್ ಮೂಡಿತ್ತಾಯ ಭಾಗವಹಿಸಿದ್ದರು.