ನ್ಯೂಸ್ ನಾಟೌಟ್: ಸೊಸೆಯೊಬ್ಬಳು ತನ್ನ ಮಾವನನ್ನೇ ಗುಂಡಿಕ್ಕಿ ಕೊಂದ ಭೀಕರ ಘಟನೆ ನಿನ್ನೆ ರಾತ್ರಿ ಕೊಡಗಿನಲ್ಲಿ ನಡೆದಿದೆ. ಕೊಡಗಿನ ಸೋಮವಾರಪೇಟೆಯ ಕಿಕ್ಕರಳ್ಳಿಯಲ್ಲಿ ಈ ಘಟನೆ ನಡೆದಿದ್ದು, 73 ವರ್ಷದ ಕೆ.ಎ. ಮಂದಣ್ಣ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಕೌಟುಂಬಿಕ ಕಲಹವೇ ಇಷ್ಟಕ್ಕೆಲ್ಲ ಕಾರಣ ಎನ್ನಲಾಗಿದ್ದು, 26 ವರ್ಷದ ನೀಲಮ್ಮ ಉರುಫ್ ಜ್ಯೋತಿ ಮಾವನನ್ನೇ ಕೊಂದವಳು ಎಂದು ತಿಳಿದು ಬಂದಿದ್ದು, ಯಾವ ಕಾರಣಕ್ಕೆ ಜಗಳ ಪ್ರಾರಂಭವಾಗಿದೆ.
ಯಾವ ಕಾರಣಕ್ಕೆ ಗುಂಡಿಕ್ಕಿ ಕೊಂದಳು ಎಂಬ ಸಂಗತಿ ವಿಚಾರಣೆ ಬಳಿಕವಷ್ಟೇ ತಿಳಿದುಬರಬೇಕಿದೆ. ಭಾನುವಾರ ರಾತ್ರಿ ಸುಮಾರು 7 ಗಂಟೆ ನಂತರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೊಸೆ ಜ್ಯೋತಿಯನ್ನು ವಶಕ್ಕೆ ಪಡೆದ ಸೋಮವಾರಪೇಟೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.