ನ್ಯೂಸ್ ನಾಟೌಟ್ : ಬಿಸಿಲಿನ ತಾಪಕ್ಕೆ ಜನ ತತ್ತರಿಸಿ ಹೋಗಿದ್ದಾರೆ.ಧಗಧಗನೇ ಬೆಂಕಿಯಂತೆ ಉರಿಯುತ್ತಿರುವ ಉಷ್ಣತೆಗೆ ಹೊರಗಡೆ ಹೋಗುವುದಕ್ಕು ಅಸಾಧ್ಯವೆಂಬಂತಿದೆ.ಹೀಗಾಗಿ ದ.ಕ.ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ಮುಂದುವರಿದಿದೆ.
ಮಂಗಳೂರಿನಲ್ಲಿ ಗರಿಷ್ಠ 36.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇನ್ನೊಂದೆಡೆ ಪುತ್ತೂರಿನಲ್ಲಿ ರಾಜ್ಯದಲ್ಲಿಯೇ ಅತಿ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ತಿಳಿದು ಬಂದಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಒಂದು ವಾರ ಕಾಲ ಉಷ್ಣಾಂಶದಲ್ಲಿ ಏರಿಕೆ ಕಂಡುಬರಲಿದ್ದು, ಬಳಿಕ ತುಸು ಇಳಿಕೆಯಾಗಲಿದೆ ಎಂಬ ಮಾಹಿತಿ ನೀಡಿದೆ. ಮಾ.5ರಿಂದ ಮತ್ತೆ ಉಷ್ಣಾಂಶದಲ್ಲಿ ಇಳಿಕೆ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಭಾರಿ ಉಷ್ಣಾಂಶ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಹಲವೆಡೆ ಬೆಂಕಿ ಕಾಣಿಸಿಕೊಂಡಿದೆ.
ಇನ್ನು ಸುಳ್ಯ ತಾಲೂಕಿನಲ್ಲಿಯೂ ಕೂಡ ಉಷ್ಣಾಂಶ ಮುಂದುವರಿದಿದೆ. ಚಿತ್ರ – ವಿಚಿತ್ರ ಹವಾಮಾನದಿಂದಾಗಿ ಆರೋಗ್ಯದಲ್ಲೂ ಏರುಪೇರಾಗುತ್ತಿದೆ. ಬೆಳಗ್ಗೆ11.30 ರಿಂದ 3.30ರವರೆಗೆ ಏರಿದ ತಾಪಮಾನ 40-41 ಡಿಗ್ರಿ ಸೆಲ್ಸಿಯಸ್ವರೆಗೆ ಏರುತಿದೆ. ಇಂದು ಕೂಡ ತಾಪಮಾನ ಏರಿಕೆಯಲ್ಲಿದ್ದು ಮಧ್ಯಾಹ್ನದ ವೇಳೆಗೆ 38-39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದೆ. ಕಳೆದ ಕೆಲವು ದಿನಗಳಿಂದ ರಾತ್ರಿಯ ವೇಲೆ ಚಳಿಯ ವಾತಾವರಣ ಕಂಡು ಬರುವುದು ಅಚ್ಚರಿ ಮೂಡಿಸಿದೆ. ರಾತ್ರಿ ಮತ್ತು ಬೆಳಗ್ಗಿನ ಜಾವ ಚಳಿ ಅನುಭವ ನೀಡುತ್ತಿದೆ.