ನ್ಯೂಸ್ ನಾಟೌಟ್: ತನ್ನ ಎರಡು ಕೈಗಳನ್ನು ಕಳೆದುಕೊಂಡು ರಾಜಸ್ಥಾನದ ಅಜ್ಮೀರ್ ಮೂಲದ ವ್ಯಕ್ತಿಯೋರ್ವನಿಗೆ ತೋಳುಗಳನ್ನು ಕಸಿ ಮಾಡುವ ಮೂಲಕ ವೈದ್ಯರ ತಂಡವೊಂದು ಭಾರತದಲ್ಲಿ ಪ್ರಪ್ರಥಮ ಭಾರಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ.
ಮುಂಬೈಯ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡ 16 ಗಂಟೆಗಳ ನಿರಂತರ ಶಸ್ತ್ರ ಚಿಕಿತ್ಸಾ ಪ್ರಕ್ರಿಯೆ ಪೂರ್ಣಗೊಳಿಸಿ ಎರಡು ತೋಳುಗಳನ್ನು ಯಶಸ್ವಿಯಾಗಿ ಮರುಜೋಡಿಸಿದೆ. ರಾಜಸ್ಥಾನದ ಅಜ್ಮೀರ್ ಮೂಲದ ಪ್ರೇಮ್ ರಾಮ್(33) ಎಂಬಾತನೆ ಕೈಗಳನ್ನು ಮರುಜೋಡಿಸಿಕೊಂಡ ವ್ಯಕ್ತಿ. ಈತ
ಕಳೆದ ಹತ್ತು ವರ್ಷಗಳ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುವ ವೇಳೆ ವಿದ್ಯುತ್ ಸ್ಪರ್ಶದಿಂದ ತೀವ್ರ ಗಾಯಗೊಂಡು ತನ್ನ ಎರಡು ಕೈಗಳನ್ನು ಕಳೆದುಕೊಳ್ಳುತ್ತಾನೆ. ಅಲ್ಲದೇ ಜೀವ ಉಳಿಸಬೇಕಾದರೆ ಎರಡು ಕೈಗಳನ್ನು ಕತ್ತರಿಸುವಂತೆ ವೈದ್ಯರು ಸೂಚಿಸಿದ್ದರು.’ ಬಳಿಕ ತನ್ನ ಎರಡು ಕೈಗಳನ್ನು ಕಳೆದುಕೊಂಡ ಪ್ರೇಮ್ ಕುಟುಂಬದವರ ಬೆಂಬಲದಿಂದ ಕೈಗಳಲ್ಲಿ ಮಾಡಬೇಕಾದ ಕೆಲಸವನ್ನು ಕಾಲುಗಳಿಂದಲೇ ಮಾಡಲು ಅಭ್ಯಾಸ ಮಾಡಿಕೊಂಡರು.’
ಇದೀಗ ಯಶಸ್ವಿಯಾಗಿ ಪ್ರೇಮ್ ಎರಡು ತೋಳುಗಳ ಕಸಿ ಮಾಡಿಕೊಂಡಿದ್ದು, ತುಂಬಾ ವರ್ಷಗಳ ಬಳಿಕ ಇದೀಗ ಪ್ರೇಮ್ ಅವರಿಗೆ ತನ್ನ ಎರಡು ಕೈಗಳು ಹಿಂದಿತಿರುಗಿ ಬಂದಂತಾಗಿದೆ. ಈ ಕಸಿ ಚಿಕಿತ್ಸೆ ಪಡೆದುಕೊಂಡ ಪ್ರೇಮ್ ರಾಮ್ ಅವರು ಏಷ್ಯಾದ ಮೊದಲ ವ್ಯಕ್ತಿಯಾಗಿದ್ದಾರೆ. ಸದ್ಯ ಪ್ರೇಮ್ ರಾಮ್ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದು, ಮುಂದಿನ 24 ತಿಂಗಳವರೆಗೆ ಈ ಪ್ರಕ್ರಿಯೆ ನಡೆಯಲಿದೆ.