ನ್ಯೂಸ್ ನಾಟೌಟ್:ಸಾಮಾನ್ಯವಾಗಿ ಮಳೆ ಹನಿಗಳು ಭೂಮಿಗೆ ಬಿದ್ದಾಗ ಛತ್ರಿ ಹಿಡಿಯುವುದು ಸಹಜ.ಅಥವಾ ಜಾಸ್ತಿ ಬಿಸಿಲಿಗೂ ಛತ್ರಿ ಹಿಡಿದುಕೊಂಡು ನಡ್ಕೊಂಡು ಹೋಗುವವರು ಇದ್ದಾರೆ.ಆದರೆ ಇಲ್ಲೇನಿದು? ವಿಚಿತ್ರ ಘಟನೆ… ಮೇಲಿನಿಂದ ಹುಳಗಳು ರಾಶಿ ರಾಶಿ ಮೈಮೇಲೆ ಬೀಳುತ್ತಿದೆ ಎಂದು ಜನ ಛತ್ರಿ ಹಿಡಿದುಕೊಂಡು ಓಡಾಡುತ್ತಿದ್ದಾರೆ.ಮಾತ್ರವಲ್ಲ ಈ ವಿದ್ಯಮಾನಕ್ಕೆ ಜನ ಗಾಬರಿ ವ್ಯಕ್ತ ಪಡಿಸುತ್ತಿದ್ದಾರೆ. ಈ ಕುರಿತಾದ ವಿಡಿಯೋವೊಂದು ಬಾರಿ ವೈರಲ್ ಆಗಿದೆ.ಈ ದೃಶ್ಯ ನೋಡಿದ್ರೆ ನಿಮಗೂ ಆಶ್ಚರ್ಯವಾಗಬಹುದು.. ಜತೆಗೆ ಒಂಚೂರು ಅಸಹ್ಯನೂ ಆಗಬಹುದು…
'Rain of worms' floods Beijing
— The Rio Times (@TheRioTimes) March 8, 2023
A "rain of worms" flooded Beijing this week, according to videos posted on social networks. In the images, it is possible to see the "animals" covering streets and vehicles. pic.twitter.com/V2uaX6Oowk
ಈ ಹುಳುಗಳನ್ನು ನೋಡಿದ್ರೆ ಆಕಾಶದಿಂದ ಹುಳುಗಳು ಬೀಳುತ್ತವೆಯೆನೋ ಎಂದು ಭಾಸವಾಗಬಹುದು… ಅಲ್ಲಲ್ಲಿ ಹುಳುಗಳು ಬೀದಿಬದಿಯಲ್ಲಿ ಮತ್ತು ಕಾರಿನ ಮೇಲೆ ಹರಡಿರುವ ಘಟನೆ ಚೀನಾದ ಬೀಜಿಂಗ್ನಿಂದ ವರದಿಯಾಗಿದೆ. ಇದು ಇಷ್ಟೊಂದು ಸಂಖ್ಯೆಯಲ್ಲಿ ಪತ್ತೆಯಾಗಿರುವುದಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.ಆದರೆ ಟ್ವಿಟ್ವರ್ನಲ್ಲಿ ವೈರಲ್ ಆಗಿರುವ ಘಟನೆಯಾಗಿದೆ. ಈ ಸಂಬಂಧ ಚಿತ್ರವಿಚಿತ್ರ ಊಹಾಪೋಹಗಳು ಹರಿದಾಡುತ್ತಿವೆ.
'Rain of worms' floods Beijing
— The Rio Times (@TheRioTimes) March 8, 2023
A "rain of worms" flooded Beijing this week, according to videos posted on social networks. In the images, it is possible to see the "animals" covering streets and vehicles. pic.twitter.com/V2uaX6Oowk
ಬಲವಾದ ಗಾಳಿ ಅಥವಾ ಸುಂಟರಗಾಳಿ ಪ್ರಭಾವದಿಂದಾಗಿ ದೂರದಲ್ಲೆಲ್ಲೋ ಇರುವ ಹುಳುಗಳ ಗುಚ್ಛಗಳು ಹೀಗೆ ಚೆಲ್ಲಾಪಿಲ್ಲಿಯಾಗಿ ಮತ್ತೆಲ್ಲೂ ಹೋಗಿ ಉದುರಿರಬಹುದು ಎಂದು ‘ದಿ ಸೈಂಟಿಫಿಕ್ ಜರ್ನಲ್ ಆಫ್ ದಿ ಮದರ್ ನೇಚರ್ ನೆಟ್ವರ್ಕ್’ ಪತ್ರಿಕೆ ವರದಿ ಮಾಡಿದೆ.ಅದೇನೆ ಆದರೂ ಈ ದೃಶ್ಯ ಮಾತ್ರ ಜನರಿಗೆ ಆಶ್ಚರ್ಯವಾಗಿ ಕಂಡಿದೆ.