ನ್ಯೂಸ್ ನಾಟೌಟ್ : ಧಾರ್ಮಿಕ ಸಾಮರಸ್ಯದ ಸಂದೇಶ ಸಾರಿದ ಘಟನೆಯೊಂದು ಶಿಮ್ಲಾದಲ್ಲಿ ನಡೆದಿದೆ. ಮುಸ್ಲಿಂ ಧರ್ಮದ ವಧು–ವರ ವಿಶ್ವ ಹಿಂದೂ ಪರಿಷತ್ ನಡೆಸುವ ಶಿಮ್ಲಾ ದೇಗುಲವೊಂದರಲ್ಲಿ ಸೋಮವಾರ ವಿವಾಹವಾಗಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಯೂ ಆಗಿರುವ ಸತ್ಯನಾರಾಯಣ ದೇಗುಲದಲ್ಲಿ ಅವರು ವಿವಾಹವಾಗಿದ್ದು,ಸುದ್ದಿ ವೈರಲ್ ಆಗಿದೆ. ಪಕ್ಕದಲ್ಲೇ ಮಸೀದಿ ಇದ್ದರೂ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮ ನಡೆದಿರುವುದು ವಿಶೇಷ.‘ಆರ್ಎಸ್ಎಸ್ ‘ಮುಸ್ಲಿಂ ವಿರೋಧಿ’ ಎಂಬ ಆರೋಪ ಇದೆ. ಈ ಮಧ್ಯೆ ಧಾರ್ಮಿಕ ಸಾಮರಸ್ಯ ಸಾರುವ ಸಂಕೇತವಾಗಿ ಈ ವಿವಾಹ ನಡೆದಿದೆ. ಇದು ಅತ್ಯಂತ ಅಪರೂಪದ ನಡೆಯಾಗಿದ್ದು, ಎಲ್ಲೆಡೆ ಹರಡಬೇಕು’ ಎಂದು ದೇಗುಲ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ವಿನಯ್ ಶರ್ಮಾ ತಿಳಿಸಿದ್ದಾರೆ.ಎಲ್ಲಾ ಧರ್ಮದವರು ಮದುವೆಯಲ್ಲಿ ಭಾಗಿಯಾಗಿದ್ದು,ತುಂಬಾ ಖುಷಿ ನೀಡಿದೆ ಎಂದು ವಧುವಿನ ತಂದೆ ತಿಳಿಸಿದ್ದಾರೆ.