ನ್ಯೂಸ್ ನಾಟೌಟ್: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ನಗರವೊಂದರಲ್ಲಿ ರಾಜಾರೋಷವಾಗಿ ಕಾಡಾನೆಯೊಂದು ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಾರ್ಚ್ 9 ರಂದು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಎರಡೇ ದಿನಗಳಲ್ಲಿ 2.6 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಊರಿಗೆ ಬಂದ ಕಾಡಾನೆಯ ವಿಡಿಯೋ ಬೀದಿ ಬದಿಯ ಕಟ್ಟಡದ ಹೊರಗೆ ಇರಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಇಲ್ಲಿದೆ ನೋಡಿ.
ಪುಟ್ಟ ಬೀದಿ, ರಸ್ತೆಯ ಎರಡು ಬದಿಗಳಲ್ಲಿ ಗಾಡಿಗಳನ್ನು ಪಾರ್ಕ್ ಮಾಡಲಾಗಿದೆ. ಜತೆಗೆ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಅಂಗಡಿಯೊಂದರ ಮುಂದೆ ನಿಂತಿರುವುದನ್ನು ಕಾಣಬಹುದು.ಸ್ವಲ್ಪ ಸಮಯದಲ್ಲಿಯೇ ಜನರು ಗಾಬರಿಯಿಂದ ಓಡಲು ಪ್ರಾರಂಭಿಸುತ್ತಾರೆ. ಆ ಸಮಯದಲ್ಲಿಯೇ ಆನೆಯೊಂದು ಅಡ್ಡಾದಿಡ್ಡಿಯಾಗಿ ರಭಸದಲ್ಲಿ ಬಂದು ಬೀದಿಗೆ ನುಗ್ಗಿದೆ. ಜತೆಗೆ ಪಾರ್ಕ್ ಮಾಡಲಾಗಿದ್ದ ವಾಹನಗಳಿಗೆ ಹಾನಿಗೊಳಿಸಿದೆ. ಈ ಘಟನೆ ಬೀದಿ ಬದಿಯ ಕಟ್ಟಡದ ಹೊರಗೆ ಇರಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಆನೆ ಬರುವ ವೇಗ ನೋಡಿದರೆ ಎದೆ ಝಲ್ಎನ್ನುತ್ತದೆ. ಹಲವು ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಈ ವಿಡಿಯೋವನ್ನು ಎರಡು ದಿನಗಳ ಹಿಂದೆ (ಮಾರ್ಚ್ 9) ಟ್ವಿಟರ್ನಲ್ಲಿ ಶೇರ್ ಮಾಡಲಾಗಿದೆ. ಪೋಸ್ಟ್ ಮಾಡಿದ ಎರಡೇ ದಿನಗಳಲ್ಲಿ 2.6 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. 18 ಸಾವಿರ ಲೈಕ್ ಗಳು, 3060 ರೀಟ್ವಿಟ್ಗಳನ್ನು ಕಾಣಬಹುದು. ಜತೆಗೆ ಸಾಕಷ್ಟು ಕಾಮೆಂಟ್ಗಳನ್ನು ಕಾಣಬಹುದು.