ನ್ಯೂಸ್ ನಾಟೌಟ್: ಊಟ ಮಾಡಿದ ತಟ್ಟೆ ತೊಳೆಯುವ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬಜಪೆ ಠಾಣಾ ವ್ಯಾಪ್ತಿಯ ಮರವೂರು ಗ್ರಾಮದ ಕೊಸ್ಟಲ್ ಗಾರ್ಡ್ ಸೈಟ್ ನಲ್ಲಿ ನಡೆದಿದೆ. ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರಾದ ಸಂಜಯ್ ಮತ್ತು ಸೊಹಾನ್ ಯಾದವ್ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆದಿದೆ.ಈ ವೇಳೆ ಸೋಹನ್ ಯಾದವ್ ಸಂಜಯ್ ನನ್ನು ಕೊಲ್ಲುವ ಉದ್ದೇಶದಿಂದ ಬಲವಾಗಿ ನೆಲಕ್ಕೆ ದೂಡಿದ್ದು, ತಲೆಗೆ ಬಲವಾದ ಏಟು ಬಿದ್ದಿದೆ.ಆತನನ್ನು ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಈ ಘಟನೆ ನಡೆದ ಬಳಿಕ ಆರೋಪಿ ಸೋಹನ್ ಯಾದವ ಪರಾರಿಯಾಗಿದ್ದ.ಇಂದು ಮಧ್ಯಾಹ್ನ 1.00 ಗಂಟೆ ವೇಳೆಗೆ ಆರೋಪಿಯನ್ನು ಮಂಗಳೂರು ರೈಲ್ವೇ ನಿಲ್ದಾಣದ ಬಳಿ ವಶಕ್ಕೆ ಪಡೆಯುವಲ್ಲಿ ಬಜಪೆ ಪೊಲೀಸರು ಯಶಸ್ವಿಯಾಗಿರುತ್ತಾರೆ. ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ ಕುಲದೀಪ್ ಕುಮಾರ್ ಜೈನ್ ಮಾರ್ಗದರ್ಶನದಂತೆ, DCP ಯವರಾದ ಶ್ರೀ ಅಂಶು ಕುಮಾರ್ (ಕಾ&ಸು) ಶ್ರೀ ದಿನೇಶ್ ಕುಮಾರ್ DCP (ಅ &ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ACP ಶ್ರೀ ಮನೋಜ್ ಕುಮಾರ್ ನಾಯ್ಕ ರವರ ನಿರ್ದೇಶನದಂತೆ,ಈ ಕಾರ್ಯಚರಣೆಯಲ್ಲಿ ಬಜಪೆ ಠಾಣಾ ಪಿ.ಐ. ಪ್ರಕಾಶ್, ಪಿ.ಸ್.ಐ. ಗುರು ಕಾಂತಿ, ಪೂವಪ್ಪ, ಎ.ಎಸ್.ಐ. ರಾಮ ಪೂಜಾರಿ ಮತ್ತು ಹೆಚ್ ಸಿ. ಗಳಾದ ಪುರುಶೋತ್ತಮ, ಸಂತೋಷ್ ಡಿ.ಕೆ. ಮಹೇಶ್, ಸುಜನ್, ರಾಜೇಶ್, ರಶೀದ್, ಹಾಗೂ ಸಂಜೀವ ಭಜಂತ್ರಿ, ಪ್ರೇಮ್ ಕುಮಾರ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದು,ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.