ನ್ಯೂಸ್ ನಾಟೌಟ್:ಇತ್ತೀಚೆಗೆ ಹೆಚ್ಚಿನ ಹೆಣ್ಮಕ್ಕಳು 25 ವರ್ಷ ದಾಟದೇ ಮದುವೆನೇ ಆಗೋದಿಲ್ಲ.ಆದರೆ ಇಲ್ಲೊಬ್ಬಳು ಹೆಣ್ಣು ಕೇವಲ 28 ವರ್ಷಕ್ಕೆ 9 ಮಕ್ಕಳ ತಾಯಿಯಾಗಿದ್ದಾಳೆ.ಈ ಖುಷಿಯನ್ನು ಆಕೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.ಮದುವೆಯಾಗಿ 12 ವರ್ಷಗಳಲ್ಲಿ ೯ ಮಕ್ಕಳನ್ನು ಹೆತ್ತ ಮಹಾತಾಯಿ ಈಕೆ.
ಈ ಅಂದದ ಮಹಿಳೆ ಹೆಸರು ಡೂಕ್.ಲಾಸ್ ವೇಗಸ್ ಮೂಲದ ಈಕೆಗೆ 39 ವರ್ಷ. ೧೭ ವರ್ಷವಾದಗ ಈಕೆ ಮೊದಲ ಬಾರಿಗೆ ತಾಯಿಯಾಗಿದ್ದಳು. ೨೦೦೧ ರಿಂದ ೨೦೧೨ ತನಕ ನಿರಂತರವಾಗಿ ಗರ್ಭವತಿಯಾಗಿ ಮಕ್ಕಳನ್ನು ಪಡೆದಿದ್ದಾಳೆ. ಸದ್ಯ ಡೂಕ್ ೨೩ ವರ್ಷದಿಂದ ಸಂತಸದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾಳೆ. ಡೂಕ್ ಈ ವಿಚಾರ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ. ಈಕೆಗೆ ೧೦ ವರ್ಷ ಮಗುವಿನಿಂದ ಹಿಡಿದು ೨೧ ವರ್ಷದವರೆಗೆ ಮಕ್ಕಳಿದ್ದಾರಂತೆ!.ಸದ್ಯ ಈ ವಿಡಿಯೋ ವೈರಲ್ ಆಗಿದ್ದು , ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದೆ.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ 👇
https://www.instagram.com/reel/ClwbFbIAoEw/?utm_source=ig_web_copy_link
ತಾಯಿಯನ್ನು ಪೂಜನೀಯ ಭಾವನೆಯಲ್ಲಿ ನೋಡಲಾಗುತ್ತದೆ. ಒಂದು ಮಗುವನ್ನು ಹೆತ್ತು ಸಾಕಪ್ಪ ಅನ್ನುವವರ ಮಧ್ಯೆ ಈ ಮಹಿಳೆ ವಿಭಿನ್ನ ಅನ್ನಿಸಿಕೊಂಡಿದ್ದು,ಮಕ್ಕಳಿರಲವ್ವ ಮನೆ ತುಂಬಾ ಎಂಬ ಮಾತು ನೆನಪಿಗೆ ಬರುವಂತೆ ಮಾಡಿದೆ.