ನ್ಯೂಸ್ ನಾಟೌಟ್: ಮಧ್ಯಪ್ರದೇಶದ ಇಂದೋರ್ನ ಮಹಿಳೆಯೊಬ್ಬರು ತ್ವರಿತ ಬಡ್ತಿ ಮತ್ತು ಇತರ ಆರ್ಥಿಕ ಪ್ರಯೋಜನಗಳಿಗಾಗಿ ತನ್ನ ಪತಿ ತನ್ನನ್ನು ತನ್ನ ಗಂಡನ ಬಾಸ್ ಜೊತೆಗೆ ಮಲಗಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಿಳೆಯು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಅಮಿತ್ ಛಾಬ್ರಾ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಳು ಎಂದು ತಿಳಿದುಬಂದಿದೆ.
ಇದೀಗ ವ್ಯಕ್ತಿಯ ವಿರುದ್ಧ ಸಂತ್ರಸ್ತೆ ದೂರನ್ನು ನ್ಯಾಯಾಲಯ ಪುರಸ್ಕರಿಸಿದ್ದು, ಮದುವೆಯ ನಂತರ ತನ್ನ ಪತಿ ಕೆಟ್ಟ ಜನರ ಸಹವಾಸಕ್ಕೆ ಸಿಲುಕಿ ಅನೈತಿಕ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತೆ ಒತ್ತಾಯಿಸಲು ಪ್ರಾರಂಭಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ.
ಮಹಿಳೆಯ ಪ್ರಕಾರ, ಉದ್ಯೋಗದಲ್ಲಿ ಬಡ್ತಿ ಮತ್ತು ಇತರ ಸವಲತ್ತುಗಳನ್ನು ಪಡೆಯಲು ಆಕೆಯ ಪತಿ ಅಮಿತ್ ಇಂತಹ ಕುಕೃತ್ಯಕ್ಕೆ ಇಳಿದಿದ್ದಾನೆ, ಈ ಹಿಂದೆ ಅಮಿತ್ನ ಸಹೋದರ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ ಕಾರಣ ಆಕೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ವರದಿ ತಿಳಿಸಿದೆ.
ತನ್ನ 12 ವರ್ಷದ ಮಗಳ ಮುಂದೆ ತನ್ನ ಸೋದರ ಮಾವ ರಾಜ್ ತನಗೆ ಹಲವು ಬಾರಿ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದು, ಮಹಿಳೆ ಲೈಂಗಿಕ ಕಿರುಕುಳವನ್ನು ವಿರೋಧಿಸಿದಾಗ, ಆಕೆಗೆ ಥಳಿಸಲಾಗಿದೆ ಎಂದು ದೂರು ನೀಡಿದ್ದಾಳೆ. ನಿರಂತರ ಕಿರುಕುಳದಿಂದ ಮನನೊಂದು ತನ್ನ ಕೈಯ ರಕ್ತನಾಳವನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.
ಮಹಿಳೆ ಅಂತಿಮವಾಗಿ ಆಗಸ್ಟ್ 2022 ರಂದು ಇಂದೋರ್ನಲ್ಲಿರುವ ತನ್ನ ಪೋಷಕರ ಮನೆಗೆ ತೆರಳಿದ್ದಾಳೆ ಆದರೂ, ಕಿರುಕುಳದ ಬಗ್ಗೆ ತನ್ನ ತಾಯಿಗೆ ತಿಳಿಸಲಿಲ್ಲ. ಕ್ರಮೇಣ ಮತ್ತೆ ಗಂಡನ ಮನೆಗೆ ಹಿಂತಿರುಗದಿದ್ದ ಕಾರಣಕ್ಕೆ ಜಗಳವಾದಾಗ ಪೋಷಕರಿಗೆ ಈ ಮಾಹಿತಿ ತಿಳಿಸಿದ್ದಾಳೆ ಎನ್ನಲಾಗಿದೆ. ಆ ನಂತರ ಆಕೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದರು. ಇದರ ಬೆನ್ನಲ್ಲೇ ಇಂದೋರ್ ಪೊಲೀಸರು ಅಮಿತ್ ನನ್ನು ಜಿಲ್ಲೆಗೆ ಕರೆಸಿ ಪತ್ನಿಗೆ ಕಿರುಕುಳ ನೀಡದಂತೆ ಸೂಚಿಸಿದ್ದಾರೆ. ಇನ್ನು ಮುಂದೆ ಪತ್ನಿಗೆ ಕಿರುಕುಳ ನೀಡುವುದಿಲ್ಲ ಎಂದು ಅಮಿತ್ ಲಿಖಿತ ತಪ್ಪೊಪ್ಪಿಗೆ ನೀಡಿರುವುದಾಗಿ ವರದಿ ತಿಳಿಸಿದೆ.
ಆದರೆ, ಸ್ವಲ್ಪ ಸಮಯದ ನಂತರ ಗಂಡನ ಮನೆಯಲ್ಲಿ ಮಹಿಳೆಯ ಅತ್ತಿಗೆ ಮತ್ತೆ ಕಿರುಕುಳ ನೀಡಲಾರಂಭಿಸಿದ್ದಾರೆ. ನಂತರ ಮಹಿಳೆಯ ಪೋಷಕರು ಇಂದೋರ್ ನ್ಯಾಯಾಲಯದ ಮೊರೆ ಹೋಗಿ ದೂರು ದಾಖಲಿಸಿದ್ದರು. ನಂತರ ನ್ಯಾಯಾಲಯವು ಮಹಿಳಾ ಕಲ್ಯಾಣ ಅಧಿಕಾರಿಯ ಮೂಲಕ ತನಿಖೆಗೆ ಆದೇಶಿಸಿತು. ತನಿಖೆಯ ನಂತರ ಮಹಿಳೆಯ ಪತಿ, ಸೋದರ ಮಾವ ಮತ್ತು ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.