ನ್ಯೂಸ್ ನಾಟೌಟ್: ಮದುವೆ ಅನ್ನುವುದು ಜೀವನದಲ್ಲಿ ಅಮೂಲ್ಯವಾದ ಕ್ಷಣ.ಆ ದಿನ ಅದ್ದೂರಿಯಾಗಿ ಮದುಮಗಳು ಮತ್ತು ಮದುಮಗ ರೆಡಿಯಾಗುತ್ತಾರೆ. ಅದರಲ್ಲೂ ಮಧುಮಗಳ ಶೃಂಗಾರವಂತು ತಾಸುಗಟ್ಟಲೆ ಇರುತ್ತೆ.ಇತ್ತೀಚೆಗೆ ಮಧುಮಕ್ಕಳು ಬ್ಯೂಟಿಪಾರ್ಲರ್ ಗೆ ಹೋಗಿ ರೆಡಿಯಾಗುವವರ ಸಂಖ್ಯೆಯೇ ಹೆಚ್ಚು.ಒಮ್ಮೆ ಹಣ ಪಾವತಿಸಿದ್ರೆ ಅವರೇ ಮೇಕಪ್ ಕೆಲಸ ಮುಗಿಸುತ್ತಾರೆ ಎಂದು ಪಾರ್ಲರ್ ಗೆ ದುಂಬಾಲು ಬೀಳುತ್ತಾರೆ.
ಹಾಗೆಯೇ ಇಲ್ಲೊಬ್ಬಳು ವಧು ತಾನು ಸುಂದರವಾಗಿ ಕಾಣಬೇಕು ಎಂಬ ಆಸೆಯಿಂದ ಪಾರ್ಲರ್ ಗೆ ಹೋಗಿದ್ದಾಳೆ. ಆದರೆ ಪಾರ್ಲರ್ ನಿಂದ ಹೊರಬಂದ್ರೆ ಮಧುಮಗಳ ಮುಖ ಪರಿಚಯವೇ ಸಿಗದಷ್ಟು ವಿರೂಪವಾಗಿ ಹೋಗಿದೆ.ಹೌದು,ಮದುವೆ ದಿನ ಚೆನ್ನಾಗಿ ಕಾಣಿಸಬೇಕೆಂದು ಬೆಸ್ಟ್ ಮೇಕಪ್ ಮಾಡಲು ಹೋಗಿ ಮುಖದ ಅಂದವನ್ನೇ ವಿರೂಪ ಮಾಡಿಕೊಂಡ ಘಟನೆ ಹಾಸನದ ಅರಸೀಕೆರೆಯಲ್ಲಿ ನಡೆದಿದೆ.ಮದುವೆ ಸಡಗರದಲ್ಲಿ ತೊಡಗಬೇಕಾದ ವಧು ಮೇಕಪ್ ಮಾಡಿದವರ ಎಡವಟ್ಟಿನಿಂದಾಗಿ ಆಸ್ಪತ್ರೆ ಸೇರಿದ್ದಾಳೆ.
ಯುವತಿ ಮದುವೆಗಾಗಿ ಮೇಕಪ್ ಮಾಡಿಸಿಕೊಳ್ಳಲು ಗಂಗಾ ಬ್ಯೂಟಿ ಪಾರ್ಲರ್ ಗೆ ಹೋಗಿದ್ದಳು. ಈ ವೇಳೆ ಬ್ಯೂಟಿ ಪಾರ್ಲರ್ ಆಂಟಿ ಮೇಕಪ್ ಮಾಡಿದ್ದಳು. ಅದ್ಯಾವ ಮೇಕಪ್ ಕ್ರೀಮ್ ಹಾಕಿದಳೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಮುಖ ಉರಿ ಬಂದಿದೆ. ಪಾರ್ಲರ್ ನವರು ಮೇಕಪ್ ಮಾಡುವುದಾಗಿ ಹೇಳಿ ಸ್ಟೀಮ್ ತೆಗೆದುಕೊಂಡಿದ್ದಳು. ಇದಾದ ಬಳಿಕ ವಧುವಿನ ಮುಖ ಊದಿಕೊಂಡು, ಸುಟ್ಟಂತೆ ಕಪ್ಪಾಗಿದೆ. ಇದರಿಂದ ವಧು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾದಳು. ಮದುವೆ ಕಾರ್ಯವನ್ನು ಮುಂದೂಡಿಕೆ ಮಾಡಿಕೊಳ್ಳಲಾಗಿದೆ. ಅರಸೀಕೆರೆ ಗಂಗಾಶ್ರೀ ಹರ್ಬಲ್ ಬ್ಯೂಟಿ ಪಾರ್ಲರ್ & ಅಂಡ್ ಸ್ಪಾ ನಲ್ಲಿ ಯುವತಿ ಮೇಕಪ್ ಮಾಡಿಸಿಕೊಂಡಿದ್ದಳು ಎಂದು ಮಾಹಿತಿ ತಿಳಿದುಬಂದಿದೆ.