ನ್ಯೂಸ್ನಾಟೌಟ್: ಭಾರತದಲ್ಲಿ 5G ಒದಗಿಸುವಲ್ಲಿ ಮುಂಚೂಣಿಯ ಟೆಲಿಕಾಂ ಕಂಪೆನಿಗಳಾಗಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್ಟೆಲ್ ಎರಡೂ ಪೈಪೋಟಿಗೆ ಬಿದ್ದಿವೆ.ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಸಂಸ್ಥೆ ಏರ್ಟೆಲ್ ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಬಳಕೆದಾರರಿಗೆ ಹೊಸ ಅನಿಯಮಿತ 5G ಡೇಟಾ ಆಫರ್ ಪ್ರಕಟಿಸಿದ್ದು, ರಿಲಯನ್ಸ್ ಜಿಯೋಗೆ ಟಕ್ಕರ್ ನೀಡುವ ಸಲುವಾಗಿ ಇದೀಗ ಏರ್ಟೆಲ್ ಕೂಡ ಅಸ್ತಿತ್ವದಲ್ಲಿರುವ ಎಲ್ಲಾ ಯೋಜನೆಗಳಲ್ಲಿ ಡೇಟಾ ಬಳಕೆಯ ಮೇಲಿನ ಮಿತಿಯನ್ನು ತೆಗೆದುಹಾಕುವುದಾಗಿ ಘೋಷಿಸಿದೆ.
“ಏರ್ಟೆಲ್ 5G ಬಳಕೆದಾರರು ಈಗ ಡೇಟಾ ಮಿತಿಗಳು ಅಥವಾ ದೈನಂದಿನ ಡೇಟಾ ಕೋಟಾದ ಬಗ್ಗೆ ಚಿಂತಿಸಬೇಕಾಗಿಲ್ಲ. ಇದೀಗ 5G ಡೇಟಾ ಬಳಕೆಗೆ ಯಾವುದೇ ಮಿತಿಯಿಲ್ಲ. 239 ರೂ. ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಎಲ್ಲಾ ಪೋಸ್ಟ್ಪೇಯ್ಡ್ ಮತ್ತು ಪ್ರಿಪೇಯ್ಡ್ ಗ್ರಾಹಕರು ಇದೀಗ ಅನಿಯಮಿತ 5G ಡೇಟಾವನ್ನು ಆನಂದಿಸಬಹುದು” ಎಂದು ಏರ್ಟೆಲ್ ಸಂಸ್ಥೆ ತಿಳಿಸಿದೆ.!
ಜಿಯೋ ತಾನು 5G ಸೇವೆಗಳನ್ನು ಆರಂಭಿಸಿರುವ ನಗರಗಳಲ್ಲಿ ಅನಿಯಮಿತ ಉಚಿತ 5G ಡೇಟಾ ಬಳಕೆಗೆ ಅನುಮತಿಸಿತ್ತು. ಇದೀಗ ಏರ್ಟೆಲ್ ಕೂಡ ಪರಿಚಯಾತ್ಮಕ ಕೊಡುಗೆಯಾಗಿ ತನ್ನ 5G ಪ್ಲಸ್ ನೆಟ್ವರ್ಕ್ನಲ್ಲಿ ಅನಿಯಮಿತ 5G ಡೇಟಾವನ್ನು ಆನಂದಿಸಬಹುದು ಎಂದು ಹೇಳಿದೆ. ಏರ್ಟೆಲ್ 5G ಪ್ಲಸ್ ಈಗ ಸುಮಾರು 270 ಭಾರತೀಯ ನಗರಗಳಲ್ಲಿ ಲಭ್ಯವಿದೆ. ಮಾರ್ಚ್ 2024ರ ವೇಳೆಗೆ ಎಲ್ಲಾ ನಗರಗಳಲ್ಲಿ 5G ಪ್ಲಸ್ ಸೇವೆ ಲಭ್ಯವಿರಲಿದ್ದು, ಈ ಎಲ್ಲಾ ನಗರಗಳಲ್ಲಿನ ಗ್ರಾಹಕರು “ಅನಿಯಮಿತ 5G ಡೇಟಾ” ಆಫರ್ ಕ್ಲೈಮ್ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.
ಚಂದಾದಾರರ ಮೊಬೈಲ್ ಸಂಖ್ಯೆಗೆ ಆಫರ್ ಲಭ್ಯವಿದ್ದರೆ, ಆನ್ನ ಮ್ಯಾನೇಜ್ ವಿಭಾಗದಲ್ಲಿ ‘Claim Unlimited 5G data’ ಟ್ಯಾಬ್ ಅನ್ನು ಕಾಣುವ ಸಾಧ್ಯತೆಯಿದೆ. ನಂತರ ಆ ಆಯ್ಕೆ ಮೇಲೆ ಟ್ಯಾಪ್ ಮಾಡಿದಾಗ, ಮತ್ತೊಂದು ವಿಂಡೋ ತೆರೆದುಕೊಳ್ಳುತ್ತದೆ. ಆ ನಂತರ ಪೇಜ್ನ ಕೆಳಭಾಗದಲ್ಲಿ Claim Now ಬಟನ್ ಅನ್ನು ಕಾಣುವಿರಿ. ಬಳಿಕ ಆ ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ಡೇಟಾ ಕೊಡುಗೆ ಸಕ್ರಿಯ ಮಾಡಬಹುದು.