ನ್ಯೂಸ್ನಾಟೌಟ್: ರಾಜಸ್ಥಾನದ ಬಿಕಾನೇರ್ನಲ್ಲಿ ಭಾನುವಾರ ಮುಂಜಾನೆ 2.16ರ ಸುಮಾರಿಗೆ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಬಿಕಾನೇರ್ನ ಪಶ್ಚಿಮಕ್ಕೆ 516 ಕಿ.ಮೀ. ದೂರದಲ್ಲಿ 8 ಕಿ.ಮೀ. ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಇದೇ ಸಮಯಕ್ಕೆ ಅರುಣಾಚಲ ಪ್ರದೇಶದ ಚಾಂಗ್ಲಾಂಗ್ನಲ್ಲೂ 3.5 ತೀವ್ರತೆಯ ಕಂಪನವಾದ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಇತ್ತೀಚೆಗೆ 6.6 ತೀವ್ರತೆಯ ಭೂಕಂಪನವಾಗಿತ್ತು. ಭೂಕಂಪಕ್ಕೆ ಪಾಕಿಸ್ತಾನದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ ಬಳಿಕ ನಾಲ್ಕು ದಿನಗಳ ನಂತರ ಪಶ್ಚಿಮ ಭಾರತದಲ್ಲಿ ಕಂಪನಗಳು ಸಂಭವಿಸಿರುವುದು ಭೀತಿಗೆ ಕಾರಣವಾಗಿದೆ.