ನ್ಯೂಸ್ ನಾಟೌಟ್ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು, ಜಿಲ್ಲೆಯ ವತಿಯಿಂದ ನಡೆಯುವ ಶೌರ್ಯ ಯಾತ್ರೆಗೆ ಸುಳ್ಯ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗ ಚಾಲನೆ ನೀಡಲಾಯಿತು. ಪ್ರಖಂಡದ ಎಲ್ಲಾ ಘಟಕಗಳಿಂದ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ತೆರೆದ ವಾಹನದಲ್ಲಿ ಜಾಥದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಶ್ರೀ ಸೋಮಶೇಖರ ಪೈಕ, ಸಂಚಾಲಕರಾದ ಹರಿಪ್ರಸಾದ್ ಎಲಿಮಲೆ, ಸಹ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಸೇವಾ ಪ್ರಮುಖ ಭಾನುಪ್ರಕಾಶ್ ಪೆಲ್ತಡ್ಕ , ವಿಧಿ ಪ್ರಮುಖ ಸಂದೀಪ್ ವಳಲಂಬೆ ಉಪಸ್ಥಿತರಿದ್ದರು.