ನ್ಯೂಸ್ನಾಟೌಟ್: “ವೈದ್ಯೋ ನಾರಾಯಣೋ ಹರಿಃ” ಎನ್ನುವ ಮಾತು ಮತ್ತೆ ನಿಜವೆಂದು ಸಾಭೀತಾಗಿದೆ.. ಮಾರ್ಚ್ ೨೧ ರಂದು ಉತ್ತರ ಭಾರತದಾದ್ಯಂತ ಪ್ರಬಲ ಭೂಕಂಪನದ ಅನುಭವವಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಆಸ್ಪತ್ರೆಯ ವೈದ್ಯರು ಧೃತಿಗೆಡದೆ ಧೈರ್ಯದಿಂದ ಹೆರಿಗೆ ಮಾಡಿಸಿದ್ದಾರೆ.
ಮಂಗಳವಾರ ಉತ್ತರ ಭಾರತದ ಕಣಿವೆ ಪ್ರದೇಶದಲ್ಲಿ ಪ್ರಬಲವಾದ ಭೂಕಂಪ ಅನುಭವವಾಗಿದ್ದು, ಈ ವೇಳೆಯಲ್ಲಿ ಸಿಸೇರಿಯನ್ ಮೂಲಕ ಮಗುವಿನ ಹೆರಿಗೆ ಮಾಡಿದ್ದಾರೆ. ಅನಂತನಾಗ್ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ಟ್ವಿಟ್ಟರ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು “ಅನಂತ್ನಾಗ್ನ ಉಪ ಜಿಲ್ಲಾ ಆಸ್ಪತ್ರೆ ಬಿಜ್ಬೆಹರಾದಲ್ಲಿ ತುರ್ತು ಸಿಸೇರಿಯನ್ ನಡೆಯುತ್ತಿದೆ, ಈ ಸಮಯದಲ್ಲಿ ಭೂಕಂಪದ ಪ್ರಬಲ ಕಂಪನವನ್ನು ಅನುಭವಿಸಲಾಯಿತು” ಎಂದು ವಿಡಿಯೋ ಹಂಚಿಕೊಳ್ಳಲಾಗಿದೆ.
ಆ ತುರ್ತು ಸಂದರ್ಭದಲ್ಲೂ ದೃತಿಗೆಡದೆ ಸಿಸೇರಿಯನ್ ಅನ್ನು ಸುಗಮವಾಗಿ ನಡೆಸಿದ ಎಸ್ಡಿಹೆಚ್ ಬಿಜ್ಬೆಹರಾ ಸಿಬ್ಬಂದಿಗೆ ಅಭಿನಂದನೆಗಳು ಮತ್ತು ತಾಯಿ ಮಗು ಆರೋಗ್ಯವಾಗಿದ್ದಾರೆ ದೇವರಿಗೆ ಧನ್ಯವಾದಗಳು” ಎಂದು ಟ್ವೀಟ್ನಲ್ಲಿ ಬರೆಯಲಾಗಿದೆ.
ನಡುಗುತ್ತಿರುವಾಗ ವೈದ್ಯರು ತಮ್ಮ ಕೆಲಸವನ್ನು ಹೇಗೆ ನಿರ್ವಹಿಸಿದರು ಮತ್ತು ಮಗುವಿನ ಜನ್ಮಕ್ಕೆ ಸಹಕರಿಸಿದರು ಎಂಬುದನ್ನು ತೋರಿಸುವ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಆ ವೇಳೆಯಲ್ಲಿ ವಿದ್ಯುತ್ ಸಂಪರ್ಕವು ಕಡಿತಗೊಂಡಿದ್ದದ್ದನ್ನು ನಾವು ವಿಡಿಯೋದಲ್ಲಿ ಗಮನಿಸಬಹುದು.