ನ್ಯೂಸ್ ನಾಟೌಟ್: ವಾಯುವ್ಯ ದೆಹಲಿಯ ಆದರ್ಶ್ ನಗರ ಪ್ರದೇಶದ ಕ್ಲಿನಿಕ್ನಲ್ಲಿ ನಾಲ್ಕು ವರ್ಷದ ಬಾಲಕಿಗೆ ಕಿರುಕುಳ ನೀಡಿದ ಆರೋಪದಲ್ಲಿ 56 ವರ್ಷದ ವೈದ್ಯರನ್ನು ದೆಹಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಭಾನುವಾರದಂದು ಬಾಲಕಿಯ ತಾಯಿ ತನ್ನ ಮಗಳನ್ನು ಹೊಟ್ಟೆ ನೋವು ಎಂದು ಸ್ಥಳೀಯ ಕ್ಲಿನಿಕ್ಗೆ ಕರೆದೊಯ್ದ ನಂತರ ಈ ಘಟನೆ ನಡೆದಿದೆ.
ಸಂತ್ರಸ್ತೆಯ ತಾಯಿ ಸೋಮವಾರ ಮಾರ್ಚ್ ೨೭ರಂದು ದೂರು ದಾಖಲಿಸಿದ್ದು, ಆಕೆಯು ತನ್ನ ಮಗಳೊಂದಿಗೆ ಕ್ಲಿನಿಕ್ಗೆ ತೆರಳಿದಾಗ ಆಕೆಗೆ ತನ್ನ ಪರ್ಸ್ ಅನ್ನು ಕ್ಲಿನಿಕ್ ನ ಹೊರಗೆ ಮರೆತಿರುವುದು ನೆನಪಿದೆ ಬಂದು ಡಾಕ್ಟರ್ ಹತ್ತಿರ ಮಗಳನ್ನು ಬಿಟ್ಟು ಹೊರ ಬರುತ್ತಾಳೆ, ನಂತರ ತಪಾಸಣಾ ಕೊಠಡಿಯೊಳಗೆ ಹಿಂತಿರುಗಿದಾಗ, ವೈದ್ಯರು ತನ್ನ ಮಗಳನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದು ಗಮನಕ್ಕೆ ಬರುತ್ತದೆ ಎಂದು ಆಕೆಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದ್ದು , ಆರೋಪಿ ವೈದ್ಯರನ್ನು ಬಂಧಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.