ನ್ಯೂಸ್ ನಾಟೌಟ್: ಕಾಂತಾರ ಚಿತ್ರದ ದೃಶ್ಯ ಕಳಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನರಸಿಂಹ ಮೂರ್ತಿಯವರು ದೂರು ದಾಖಲಿಸಿಕೊಂಡಿದ್ದಾರೆ.
ಕಾಂತಾರ ಸಿನಿಮಾದ ದೃಶ್ಯಗಳನ್ನು ಕಳುಹಿಸಿ ‘ಇದೇ ರೀತಿ ಸಾಯ್ತೀಯ’ ಎಂದು ಕುಣಿಗಲ್ನಲ್ಲಿ ನರಸಿಂಹ ಮೂರ್ತಿ ಎಂಬ ವ್ಯಕ್ತಿಗೆ ಶರತ್ ಕುಮಾರ್ ಎಂಬಾತ ಹತ್ಯೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.
ನರಸಿಂಹ ಮೂರ್ತಿ ಪತ್ನಿ ಹೆಸರಿನಲ್ಲಿ ಎರಡು ಎಕರೆ ಜಾಗ ಖರೀದಿಸಿದ್ದು ಅಲ್ಲಿ ಶರತ್ ಕುಮಾರ್ ಅವರು ಅತಿಕ್ರಮ ಪ್ರವೇಶ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿಂದೆ ನರಸಿಂಹ ಮೂರ್ತಿ ದೂರು ಈ ಕುರಿತು ದೂರು ನೀಡಿದ್ದರು. ಸದ್ಯ ಜಮೀನು ವ್ಯಾಜ್ಯ ನ್ಯಾಯಾಲಯದಲ್ಲಿದೆ ಎಂದು ವರದಿ ತಿಳಿಸಿದೆ.
ಇದೇ ಪ್ರಕರಣ ಸಂಬಂಧಿಸಿ ಆತ ಕೊಲೆ ಬೆದರಿಕೆ ಹಾಕುತ್ತಿದ್ದಾನೆ. ವಾಟ್ಸ್ಯಾಪ್ ಮೂಲಕ ಕಾಂತಾರ ದೃಶ್ಯಗಳನ್ನು ಕಳುಹಿಸಿ ಇದೇ ರೀತಿ ಸಾಯ್ತೀಯ ಎಂದು ಬೆದರಿಸಿದ್ದಾನೆ ಎನ್ನಲಾಗಿದೆ. ಈ ಕುರಿತು ನರಸಿಂಹ ಮೂರ್ತಿ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕಿರುಕುಳ, ಕೊಲೆ ಬೆದರಿಕೆ ದೂರು ದಾಖಲಿಸಿ, ಎಫ್ಐಆರ್ ಕೂಡ ಉಲ್ಲೇಖಿಸಿದ್ದು, ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.