ನ್ಯೂಸ್ ನಾಟೌಟ್: ಸ್ನೇಹಿತನ ಹೆಂಡತಿಯನ್ನೇ ಪಟಾಯಿಸಿ ಮದುವೆ ಆದದ್ದು ಮಾತ್ರ ಅಲ್ಲದೇ ಕೊನೆಗೆ ಆಕೆಯನ್ನು ಮದುವೆಯಾಗಿ ಇದೀಗ ಮೊದಲ ಗಂಡನ ಮಗನನ್ನೇ ಕೊಂದ ಪ್ರಕರಣವೊಂದು ಬಾಗಲೂರಿನಲ್ಲಿ ಬೆಳಕಿಗೆ ಬಂದಿದೆ.
ಪ್ರವೀಣ್ ಮತ್ತು ಸಂಪತ್ ಆತ್ಮೀಯ ಸ್ನೇಹಿತರಾಗಿದ್ದು, ಆಗಾಗ ಪ್ರವೀಣ್ ತನ್ನ ಮನೆಗೆ ಸ್ನೇಹಿತ ಸಂಪತ್ನನ್ನು ಕರೆದುಕೊಂಡು ಬರುತ್ತಿದ್ದ. ಪ್ರವೀಣ್ ಟಿಪ್ಪರ್ ಲಾರಿಯ ಡ್ರೈವರ್ ಆಗಿದ್ದು, ಸ್ನೇಹಿತ ಸಂಪತ್ನನ್ನು ಅಪಾರವಾಗಿ ನಂಬಿದ್ದ. ಆದರೆ ಪ್ರವೀಣ್ ನ ಪತ್ನಿಯೊಂದಿಗೆ ಸಂಪತ್ತ್ ಅಕ್ರಮ ಸಂಬಂಧ ಹೊಂದಿದ್ದಲ್ಲದೆ, ಪ್ರವೀಣ್ ಕೆಲಸಕ್ಕೆ ಹೋಗ್ತಿದ್ದಾಗ ಸಂಪತ್ ಮನೆಗೆ ಬರುತ್ತಿದ್ದ ಎಮದು ತಿಲಿದುಬಂದಿದೆ. ಕೊನೆಗೆ ಇವರಿಬ್ಬರ ರಹಸ್ಯ ಬಯಲಾಗುತ್ತಿದ್ದಂತೆ ಪ್ರವೀಣ್ ಆಕೆಯಿಂದ ದೂರವಾದ. ಕೊನೆಗೆ ಡಿವೋರ್ಸ್ ಆದ ಪ್ರವೀಣ್ ಪತ್ನಿ ಪುಷ್ಪಳನ್ನ ರಿಜಿಸ್ಟರ್ ಆಗುವ ಮೂಲಕ ಸಂಪತ್ತ್ ವರಿಸಿದ್ದನು ಎಂದು ಮೂಲಗಳು ತಿಳಿಸಿವೆ.
ಪುಷ್ಪಳನ್ನು ರಿಜಿಸ್ಟರ್ ಮ್ಯಾರೇಜ್ ಆದ ಸಂಪತ್ ಕೆಜಿಎಫ್ನಲ್ಲಿ ಕೆಲಸ ಮಾಡುತ್ತಿದ್ದ, ಇತ್ತ ಪುಷ್ಪ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಿದ್ದಳು. ಹೀಗಿರುವಾಗ ಪುಷ್ಪ ನಡತೆ ಮೇಲೆ ಅನುಮಾನ ಪಟ್ಟು ಸಂಪತ್ ಪದೇ ಪದೇ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಇದ್ದರಿಂದ ನೊಂದು ಆಕೆ ಮರು ಮದುವೆಯಾದ ಸಂಪತ್ ನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಳು.
ಆ ನಂತರ ಸಾಕಷ್ಟು ಬಾರಿ ಸಂಪತ್ ಪುಷ್ಪಳ ಮನೆ ಬಳಿ ಬಂದಾಗ ಆಕೆ ಸಂಪತ್ತ್ ಗೆ ಸಿಕ್ಕಿರಲಿಲ್ಲ, ಅದಕ್ಕೆ ಸೇಡು ತೀರಿಸಿಕೊಳ್ಳಲು ಮಕ್ಕಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಗೆ ಟ್ರೈ ಮಾಡಿದ್ದನು. ಮೊದಲು ಮನೆ ಬಳಿ ಪುಷ್ಪ ಮಗಳನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿದ ಆದರೆ ಅದು ವಿಫಲವಾಗಿತ್ತು. ನಂತರ ಪುಷ್ಪನ ಮಗ ಚೇತನ್ ರೆಡ್ಡಿಯನ್ನು ಕಿಡ್ನಾಪ್ ಮಾಡಲು ಪ್ಲಾನ್ ಮಾಡಿದ್ದ ಎನ್ನಲಾಗಿದೆ.
ಪ್ರವೀಣ್ ಪುತ್ರ ಚೇತನ್ ರೆಡ್ಡಿಯನ್ನು ಪುಷ್ಪ ಚಿಲ್ಡ್ರನ್ ವುಡ್ ಕೇಂದ್ರದಲ್ಲಿ ಹಾಕಿದ್ದಳು. ಇದನ್ನೇ ಪ್ಲಾನ್ಗಾಗಿ ಬಳಸಿ ಚೇತನ್ ಬಿರಿಯಾನಿ ಹಾಗೂ ಚಾಕಲೇಟ್ ಕೊಡಿಸುವುದಾಗಿ ಕರೆದುಕೊಂಡು ಹೋಗಿ, ಪುಷ್ಪಳಿಗೆ ಬೆದರಿಕೆಯ ಕಾಲ್ ಮಾಡಿದ್ದ , ಆದರೆ ಪುಷ್ಪ ನಂಬರ್ ಬ್ಲಾಕ್ ಮಾಡಿದ್ರಿಂದ ಕಾಲ್ ರಿಸೀವ್ ಮಾಡಿರಲಿಲ್ಲ,. ಈ ಕೋಪದಿಂದ ಪಕ್ಕದಲ್ಲಿದ್ದ ಕೆರೆಗೆ ಮಗ ಚೀತನ್ ನನ್ನ ತಳ್ಳಿದ್ದ. ಮಗನನ್ನು ಸಂಪತ್ ಕರೆದುಕೊಂಡು ಹೋಗಿದ್ದಾನೆಂದು ಗೊತ್ತಾದ ಬಳಿಕ ಸಂಜೆ ಪ್ರವೀಣ್ ಮತ್ತು ಪುಷ್ಪ ಇಬ್ಬರು ಸಂಪತ್ ಬಳಿ ಬಂದು ಮಗನ ವಿಷಯ ಕೇಳಿದಾಗ ನನಿಗೆ ಗೊತ್ತಿಲ್ಲ ಎಂದು ರೂಂ ಸೇರಿದವನು ಪಾಲಿಡಾನ್ ಕುಡಿದಿದ್ದ. ಈ ವಿಚಾರ ಗೊತ್ತಾಗುತ್ತಿದ್ದಂತೆ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಒಂದು ವಾರದ ನಂತರ ಅಸಲಿ ಸತ್ಯ ಹೊರಬಿದ್ದಿದೆ.
ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಚೇತನ್ ಮೃತ ದೇಹ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಬಾಗಲೂರು ಪೊಲೀಸರಿಂದ ಆರೋಪಿ ಸಂಪತ್ ಬಂಧಿಸಿದ್ದಾರೆ.