ನ್ಯೂಸ್ನಾಟೌಟ್: ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಮಂಗಳವಾರ ಫೆ.೨೮ ರಂದು ಬೆಳಗ್ಗೆ ನಡೆದಿದೆ.
ಆಂಧ್ರಪ್ರದೇಶ ಇನ್ನರ್ ರಿಂಗ್ ರೋಡ್ ನಲ್ಲಿ ಬೈಕ್ ಶೋರೂಂನ ಸೆಕ್ಯೂರಿಟಿ ಗಾರ್ಡ್ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದೇ ವೇಳೆಗೆ ಅರಂದಲ್ಪೇಟೆಯ ಲಿಕ್ಕರ್ ಮಾರ್ಟ್ನಲ್ಲಿ ಮತ್ತೊಬ್ಬ ಭದ್ರತಾ ಸಿಬ್ಬಂದಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೊದಲ ಕೊಲೆ ಆರೋಪಿಗಳು ಬೈಕ್ಗಳನ್ನು ಕದಿಯುವ ಯತ್ನದಲ್ಲಿ ಸಿಬ್ಬಂದಿಯನ್ನು ಕೊಂದಿದ್ದಾರೆ ಎನ್ನಲಾಗಿದೆ.
ಆದರೆ, ನಿಖರವಾಗಿ ಎರಡು ಕೊಲೆಗಳ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ. ಪ್ರತ್ಯೇಕ ಕೊಲೆಯೋ ಅಥವಾ ಈ ಸರಣಿ ಕೊಲೆಗೆ ಸಂಬಂಧವಿದೆಯೊ ಎಂದು ಇನ್ನಷ್ಟೇ ತಿಳಿಯಬೇಕಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು-ಮುಟ್ಟಿದೆ.