ನ್ಯೂಸ್ ನಾಟೌಟ್: ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀವಾಗಿ ವರ್ತಿಸುತ್ತಿರುವ ಜೋಡಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ಹೋಲಿ ಹಬ್ಬದ ಸಂದರ್ಭದಲ್ಲೂ ಜೋಡಿಯೊಂದು ಜಾಲಿಯಾಗಿ ಚಲಿಸುತ್ತಿದ್ದ ಬೈಕ್ನಲ್ಲೇ ರೋಮ್ಯಾನ್ಸ್ ಮಾಡಿ ಸುದ್ದಿಯಾಗಿದೆ.
ಹೋಲಿ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದ ಜೋಡಿಯೊಂದು ಮೋಟಾರು ಬೈಕ್ನಲ್ಲಿ ರೊಮ್ಯಾನ್ಸಿಂಗ್ ಸ್ಟಂಟ್ ಮಾಡುತ್ತಾ ಜಾಲಿ ರೈಡ್ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೈಕ್ ನ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇಂತಹ ಘಟನೆ ಇದೇನೂ ಮೊದಲಲ್ಲ. ಪ್ರೇಮಿಗಳ ದಿನದಂದು ಜೋಡಿಗಳ ರೊಮ್ಯಾನ್ಸಿಂಗ್ ಸ್ಟಂಟ್ ಸಾಕಷ್ಟು ಸುದ್ದಿಯಾಗಿತ್ತು.