ನ್ಯೂಸ್ ನಾಟೌಟ್: ಚೀನಾ ಮೂಲದ ಆ್ಯಪ್ ಕಂಪನಿಗಳಿಗೆ ಸೇರಿದ 106 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಬುಧವಾರ ಜಪ್ತಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಚೀನಾ ಮೂಲದ ಆ್ಯಪ್ ಕಂಪನಿ ಮಾಲೀಕರು, ಆ್ಯಪ್ಗಳ ನಿರ್ದೇಶಕರನ್ನಾಗಿ ಭಾರತ ಮೂಲದ ವ್ಯಕ್ತಿಗಳನ್ನು ನೇಮಿಸಿಕೊಂಡಿದ್ದಾರೆ. ಜೊತೆಗೆ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು, ಕೆವೈಸಿ ಪಡೆದುಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಆ ಹೆಸರಿನಲ್ಲಿಯೇ ಭಾರತದಲ್ಲಿ ಶಾಖೆಗಳನ್ನು ತೆರೆದು, ಸಾಲ ನೀಡಿ ಇಲ್ಲಿನ ಜನರಿಗೆ ವಂಚಿಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ.
ಈ ವೇಳೆ ಅಕ್ರಮ ಹಣ ವಹಿವಾಟ ನಡೆಸಿದ ಮಾಹಿತಿ ದೊರಕಿದ ಆಧಾರದ ಮೇಲೆ, ಇಡಿ ಪಿಎಂಎಲ್ಎ ಅಡಿ ಪ್ರಕರಣ ದಾಖಲಿಸಿಕೊಂಡು, ರಾಜೋರ್ಪೇ, ಕ್ಯಾಷ್ ಫ್ರೀ, ಪೇಟಿಯಂ, ಪೇಯು, ಇಜ್ಹಿಬುಸ್ ಮತ್ತು ವಿವಿಧ ಬ್ಯಾಂಕ್ಗಳಲ್ಲಿ ವಹಿವಾಟು ನಡೆಸಿರುವುದು ಪತ್ತೆ ಹಚ್ಚಿ 106 ಕೋಟಿ ರೂ. ಮೌಲ್ಯದ ನಗದು ಸೇರಿ ಚರಾಸ್ತಿ ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ.