ವಿವಾಹಿತ ಮಹಿಳೆಗೆ ಚಲಿಸುತ್ತಿದ್ದ ಕಾರಿನಲ್ಲಿ ಕಿರುಕುಳ ನೀಡಿ, ಹಲ್ಲೆ ನಡೆಸಿ ನಂತರ ರಸ್ತೆ ಬದಿ ಎಸೆದು ಆರೋಪಿಗಳು ಪರಾರಿಯಾದ ಘಟನೆ ಆಲಂಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ವರದಿಯಾಗಿದೆ.
ಡಿಸಿಪಿ, ಕೇಂದ್ರೀಯ ಡಿಸಿಪಿ ಅಪರ್ಣಾ ರಜತ್ ಕೌಶಿಕ್ ಅವರು ತೀವ್ರವಾಗಿ ಗಾಯಗೊಂಡ ಮಹಿಳೆ ಚಾರ್ಬಾಗ್ ರೈಲ್ವೆ ನಿಲ್ದಾಣದ ಹಿಂಭಾಗದ ಮಸೀದಿ ರಸ್ತೆಯಲ್ಲಿ ಬಿದ್ದಿರುವುದು ಕಂಡುಬಂದಿದೆ, ಅಲ್ಲಿಂದ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇಬ್ಬರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಕಿರುಕುಳ, ಥಳಿಸುವಿಕೆ, ಗಾಯಗೊಳಿಸುವಿಕೆ ಮತ್ತು ಇತರ ಕಿರುಕುಳ ಅಪರಾಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಪಶ್ಚಿಮ ಬಂಗಾಳದ ರಿಂಕು ಇಸ್ಲಾಂ ಎಂಬಾತನನ್ನು ಮದುವೆಯಾಗಿದ್ದಳು ಮತ್ತು ನಾಕಾದ ಪಂಡರಿಬಾ ಎಂಬಲ್ಲಿ ನೆಲೆಸಿದ್ದಾಳೆ.ಮಂಗಳವಾರ ರಾತ್ರಿ ಖೈಸರ್ಬಾಗ್ಗೆ ತೆರಳಿದ್ದ ಆಕೆ ಅಲ್ಲಿಂದ ಮನೆಗೆ ಹಿಂತಿರುಗಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
“ಕೈಸರ್ಬಾಗ್ನಲ್ಲಿ ಇಬ್ಬರು ಯುವಕರು ತನ್ನನ್ನು ತಮ್ಮ ಕಾರಿನಲ್ಲಿ ಕುಳಿತುಕೊಳ್ಳುವಂತೆ ಬಲವಂತಪಡಿಸಿದರು ಮತ್ತು ಅನುಚಿತವಾಗಿ ಸ್ಪರ್ಶಿಸಿದರು. ವಿರೋಧಿಸಿದಾಗ ಅವರು ಆಕೆಯ ಬಟ್ಟೆಗಳನ್ನು ಹರಿದು, ಆಕೆಯ ಮೇಲೆ ಹಲ್ಲೆ ನಡೆಸಿ ಚಲಿಸುತ್ತಿದ್ದ ಕಾರಿನಿಂದ ಹೊರ ದೂಡಿದ್ದಾರೆ” ಎಂದು ಮಹಿಳೆ ಹೇಳಿಕೆ ನೀಡಿದ್ದಾರೆ.
“ನಾವು ಅಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡುತ್ತಿದ್ದೇವೆ ಮತ್ತು ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಎಂದು ಡಿಸಿಪಿ ಹೇಳಿದರು ಮಾಹಿತಿ ನೀಡಿದ್ದಾರೆ.