ನ್ಯೂಸ್ ನಾಟೌಟ್: ಇತ್ತೀಚಿಗೆ ಮಹಿಳೆಯರ ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದೆ. ಅದರಲ್ಲೂ ಬಸ್ ನಲ್ಲಿ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಇಲ್ಲೊಬ್ಬ ಬಸ್ ಕಂಡೆಕ್ಟರ್ ಬಸ್ನೊಳಗೆ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತನನ್ನು ಕೆಎಸ್ಆರ್ಟಿಸಿ ಬಸ್ ಡಿಪೋ ನಿರ್ವಾಹಕ ದವಾಳ್ ಸಾಬ್ ಎಂದು ಗುರುತಿಸಲಾಗಿದೆ.
ಕಲ್ಲಡ್ಕ ಶಾಲೆಯೊಂದರ ವಿದ್ಯಾರ್ಥಿನಿ ಮಾ.25ರಂದು ಶಾಲೆ ಮುಗಿಸಿ ಮನೆಗೆ ಬಸ್ಸ್ನಲ್ಲಿ ತೆರಳಿದ್ದಳು. ಕಲ್ಲಡ್ಕದಿಂದ ಬರುವ ವೇಳೆ ಪಾಣೆಮಂಗಳೂರು ಸ್ಟಾಪ್ನಲ್ಲಿ ಬಸ್ಸ್ಲ್ಲಿದ್ದ ಎಲ್ಲಾ ಪ್ರಯಾಣಿಕರು ಇಳಿದು ಹೋಗಿದ್ದರು. ಆ ವೇಳೆ ಬಸ್ಸ್ನಲ್ಲಿ ವಿದ್ಯಾರ್ಥಿನಿ, ಬಸ್ಸ್ ಚಾಲಕ ಮತ್ತು ನಿರ್ವಾಹಕ ಮೂರೇ ಜನ ಇದ್ದರು. ಈ ಸಂದರ್ಭ ಬಾಗಲಕೋಟೆ ನಿವಾಸಿ ಬಿ.ಸಿ. ರೋಡ್ ಬಸ್ಸ್ ಡಿಪೋ ನಿರ್ವಾಹಕ ದವಾಳ್ ಸಾಬ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಪ್ರಕರಣ ದಾಖಲಾದ ಅರ್ಧ ಗಂಟೆಯಲ್ಲಿ ಆರೋಪಿಯನ್ನು ಬಂಟ್ವಾಳ ನಗರದ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಫೋಕ್ಸೋ ಕಾಯ್ಡೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ಸ್ ಪೆಕ್ಟರ್ ವಿವೇಕಾನಂದ ನೇತೃತ್ವದಲ್ಲಿ ಬಂಟ್ವಾಳ ನಗರ ಠಾಣೆ ಎಸ್.ಐ ರಾಮಕೃಷ್ಣ ಅವರ ತಂಡ ಬಂಧಿಸಿದೆ.