ನ್ಯೂಸ್ ನಾಟೌಟ್ : ಎಟಿಎಂ ಅಂದಾಗ ಸಾಮಾನ್ಯವಾಗಿ ಹಣ ನೆನಪಾಗುತ್ತೆ.ಇನ್ಮುಂದೆ ಎಟಿಎಂ ಎಂದಾಗ ಬಾಯಲ್ಲಿ ನೀರೂರುವುದು ಗ್ಯಾರಂಟಿ.. ಅರೇ ಇದೇನಿದು? ಎಟಿಎಂಗೂ ಈ ಬಾಯಿಗೂ ಏನ್ರಿ ಕನೆಕ್ಷನ್ ಅಂತ ಯೋಚನೆ ಮಾಡುತ್ತಿರಬಹುದು.. ಹೌದು, ಇನ್ನು ಮುಂದಿನ ದಿನಗಳಲ್ಲಿ ಎಟಿಎಂ ಕಾರ್ಡ್ ನಂತೆ ಹಣ ಪಡೆಯುವ ಶೈಲಿಯಲ್ಲಿ ಬಿರಿಯಾನಿಯೂ ಸಿಗಲಿದೆ!
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ತುಂಬಾನೆ ಮುಂದುವರಿಯುತ್ತಲೇ ಇದೆ. ಇದೀಗ ಎಟಿಎಂ ಬಿರಿಯಾನಿಯು ಆ ಸಾಲಿಗೆ ಬಂದು ಸೇರಲಿದೆ. ಹೀಗೊಂದು ವ್ಯವಸ್ಥೆ ಚೈನ್ನೈನಲ್ಲಿ ಆರಂಭಗೊಂಡಿದೆ. ಚೆನ್ನೈ ಮೂಲದ ಸ್ಟಾರ್ಟ್ ಅಪ್ ಕಂಪೆನಿಯಾಗಿರುವ ಬಾಯಿ ಮೀಟು ಕಲ್ಯಾಣಂ ಚೆನ್ನೈ ನ ಕೊಳತ್ತೂರಿನಲ್ಲಿ ಬಿರಿಯಾನಿ ಎಟಿಎಂ ಆರಂಭಿಸಿದೆ.
ಇಲ್ಲಿ ಎಟಿಯಂ ಯಂತ್ರದ ಹಾಗೆ ಮೂರು ಯಂತ್ರಗಳಿರುತ್ತದೆ. ಆ ಮೂರು ಯಂತ್ರಗಳಲ್ಲಿ ನೀವು ಹೋಗುವ ಯಂತ್ರಗಳಲ್ಲಿ ಬಿರಿಯಾನಿಯ ಮೆನುಗಳು ಬರುತ್ತದೆ. ಅದರಲ್ಲಿ ಆಯ್ಕೆ ಮಾಡಿದ ಬಳಿಕ ಎಟಿಯಂ ಕಾರ್ಡ್ ಅಥವಾ ಕ್ಯೂಆರ್ ಕಾರ್ಡ್ ಮೂಲಕ ಹಣವನ್ನು ಪಾವತಿಸಬಹುದು. ಅದಾದ ಬಳಿಕ ಬಿರಿಯಾನಿ ಪ್ಯಾಕ್ ಆಗಿ ಬರಲು ಎಷ್ಟು ನಿಮಿಷವೆಂದು ತೋರಿಸುತ್ತದೆ. ನಂತರ ಯಂತ್ರದ ಕೆಳಗೆ ಒಂದು ಬಾಗಿಲು ರೀತಿ ಒಪನ್ ಆಗಿ ಅಲ್ಲಿ ನಿಮ್ಮ ಬಿರಿಯಾನಿಯ ಅಚ್ಚುಕಟ್ಟಾದ ಪ್ಯಾಕ್ ರೆಡಿಯಾಗಿ ಇರುತ್ತದೆ.ಭಾರತದ ಮೊದಲ ಬಿರಿಯಾನಿ ಎಟಿಎಂ ಇದಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದರ ವಿಡಿಯೋ ವೈರಲ್ ಆಗಿದೆ.