ನ್ಯೂಸ್ ನಾಟೌಟ್ : ಪ್ರೀತಿ ಮಾಡಬಾರದು ಮಾಡಿದರೆ ಮದುವೆಯಾಗಿ ಕಡೆಯವರೆಗೂ ಆಕೆಯೊಂದಿಗೆ ಜೀವನ ನಡೆಸಬೇಕು. ಆದರೆ ಇಲ್ಲೊಬ್ಬ ಯುವಕ ತಾನು ಪ್ರೀತಿ ಮಾಡಿದ ಪ್ರಿಯತಮೆಗೆ ಕೈ ಕೊಟ್ಟು ಇನ್ನೊಂದು ಹುಡುಗಿಯನ್ನು ಮದುವೆಯಾಗಲು ಹೊರಟಿದ್ದಾನೆ.ಈ ವಿಷಯ ತನ್ನ ಪ್ರೀತಿಸಿದ ಪ್ರಿಯತಮೆಗೆ ತಿಳಿದು ಆಕೆ ಬಿಸಿಬಿಸಿ ಎಣ್ಣೆಯನ್ನು ಮುಖಕ್ಕೆ ಎರಚಿದ ಘಟನೆ ನಡೆದಿದೆ.
ಏನಿದು ಘಟನೆ?
ಕಾರ್ತಿ ಸಂತ್ರಸ್ತ ಯುವಕ. ಈಗ ಬೇರೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯವನ್ನು ಮೀನಾದೇವಿ ತಿಳಿದು ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ಕೋಪಗೊಂಡ ಮೀನಾ ದೇವಿ ಆತನ ಮೇಲೆ ಕುದಿಯುವ ಎಣ್ಣೆಯನ್ನು ಸುರಿದಿದ್ದಾಳೆ.ತಮಿಳುನಾಡಿನ ಈರೋಡ್ನಲ್ಲಿ ಪ್ರೀತಿಸಿ ಮೋಸ ಮಾಡಿದ ತನ್ನ 27 ವರ್ಷದ ಪ್ರಿಯಕರನ ಮೇಲೆ ಕುದಿಯುವ ಎಣ್ಣೆಯನ್ನು ಸುರಿದ ಯುವತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಪರಿಣಾಮ ಯುವಕ ಗಂಭೀರ ಸ್ಥಿತಿಯಲ್ಲಿದ್ದಾನೆಂದು ತಿಳಿದು ಬಂದಿದೆ.ಸಂತ್ರಸ್ತ ಯುವಕ ಕಾರ್ತಿ ಭವಾನಿಯ ವರ್ಣಪುರಂ ನಿವಾಸಿಯಾಗಿದ್ದಾನೆ.ಪೆರುಂದುರೈನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ.ತನ್ನ ಸಂಬಂಧಿಕರೊಬ್ಬರಾದ ಮೀನಾ ದೇವಿಯೊಂದಿಗೆ ಸಂಬಂಧ ಹೊಂದಿದ್ದು, ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಸಿ ಎಣ್ಣೆ ಸುರಿದ ಪರಿಣಾಮ ಯುವಕನ ಕೈ ಮತ್ತು ಮುಖ ಉರಿಯಲಾರಂಭಿಸಿದ್ದರಿಂದ ನೆಲಕ್ಕೆ ಬಿದ್ದಿದ್ದಾನೆ.ಸಹಾಯಕ್ಕಾಗಿ ಆತನ ಕೂಗು ಕೇಳಿದ ನೆರೆಹೊರೆಯವರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ಘಟನೆಗೆ ಸಂಬಂಧಿಸಿ ಮೀನಾದೇವಿಯನ್ನು ಬಂಧಿಸಲಾಗಿದೆ.ಈ ಘಟನೆ ಕುರಿತಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.