ನ್ಯೂಸ್ ನಾಟೌಟ್: ಒಂದೂವರೆ ತಿಂಗಳ ಹಿಂದೆ ಮಹಿಳೆಯೊಬ್ಬಳು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಸಜೀಪಪಡು ಗ್ರಾಮದ ಸೇನರಬೆಟ್ಟುನಲ್ಲಿ ನಡೆದಿತ್ತು. ಪತ್ನಿಯ ಸಾವಿನ ಪ್ರಕರಣದಲ್ಲಿ ಯುವಕನೊಬ್ಬನ ಕೈವಾಡವಿರುವ ಬಲವಾದ ಸಂಶಯವಿದ್ದು, ಹೀಗಾಗಿ ಸಮಗ್ರ ತನಿಖೆಯಾಗಬೇಕು ಎಂದು ಆಕೆಯ ಪತಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಎಂದು ವರದಿ ತಿಳಿಸಿದೆ.
ಏನಿದು ಘಟನೆ?
ಸೇನರಬೆಟ್ಟು ನಿವಾಸಿ ಸತೀಶ್ ಪಿ. ಅವರ ಪತ್ನಿ ಬೀನಾ ಸಿ. ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವೇಳೆ ಮಹಿಳೆಯ ಕಿವಿಯಲ್ಲಿ ಇಯರ್ ಫೋನ್ ಇದ್ದು, ಆಕೆಯ ಮೊಬೈಲ್ ಕೆಳಗಡೆ ಬಿದ್ದುಕೊಂಡಿತ್ತು. ಹೀಗಾಗಿ ಅದು ವ್ಯವಸ್ಥಿತ ಸಂಚು ಎಂಬ ಸಂಶಯ ಮೂಡುತ್ತಿದೆ ಎಂದು ದೂರು ನೀಡಲಾಗಿತ್ತು.
ಮಂಗಳೂರನಲ್ಲಿ ಕೆಲಸಕ್ಕಿದ್ದ ತಾನು ವಾರಕ್ಕೊಮ್ಮೆ ಮನೆಗೆ ಹೋಗುತ್ತಿದ್ದೆ. ಈ ವೇಳೆ ಯುವಕನೋರ್ವ ಮನೆಗೆ ಬಂದು ಹೋಗುತ್ತಿದ್ದು, ಆತನೇ ಕಿರುಕುಳ ನೀಡಿ ಆತ್ಮ ಹತ್ಯೆಗೆ ಪ್ರೇರಣೆ ನೀಡಿದ್ದಾನೆ. ಜೊತೆಗೆ ಘಟನೆಯ ಕೆಲವು ದಿನಗಳ ಹಿಂದೆ ತನ್ನ ಪತ್ನಿಯ ತಾಯಿಗೆ ಕರೆ ಮಾಡಿ ಬೀನಾ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಹೇಳಿದ ಈ ವೇಳೆ ಆಕೆಯನ್ನು ವಿಚಾರಿಸಿದಾಗ ಯುವಕ ಕಿರುಕುಳ ನೀಡುವ ವಿಚಾರವನ್ನು ತಾಯಿಯ ಬಳಿ ಹೇಳಿಕೊಂಡಿದ್ದಳು ಎಂದು ತಿಳಿದುಬಂದಿದೆ.
ಘಟನೆ ನಡೆದ ದಿನವೂ ಪತ್ನಿಯ ತಾಯಿಗೆ ಕರೆ ಮಾಡಿ ಬೀನಾ ಆತ್ಮಹತ್ಯೆಯ ವಿಚಾರ ಹೇಳಿದ್ದಾಳೆ ಎಂದು ಮೃತ ಮಹಿಳೆಯ ಪತಿ ಸತೀಶ್ ಎಸ್ಪಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.