ನ್ಯೂಸ್ ನಾಟೌಟ್: ತುಂಬು ಗರ್ಭಿಣಿಯರಿಗೆ ಹೆರಿಗೆ ದಿನಾಂಕ ಹತ್ತಿರ ಬಂದಿರುತ್ತೆ.ಹೀಗಾಗಿ ಹೆಚ್ಚಾಗಿ ಹೊರಗಡೆ ಕಾಣಿಸಿಕೊಳ್ಳೋದು,ಸುತ್ತಾಡೋದು ವಿರಳ.ಬಹುಮುಖ್ಯವಾಗಿ ಅವರಿಗೆ ಹಲವು ಸಮಸ್ಯೆಗಳು ಕಾಡುತ್ತಿರುತ್ತೆ.ಎದ್ದು ಓಡಾಡುವುದು ಕೂಡ ತ್ರಾಸ ಎಂದೆನಿಸುತ್ತಿರುತ್ತೆ.ಆದರೆ ಇಲ್ಲೊಬ್ಬರು ತುಂಬು ಗರ್ಭಿಣಿ ಮನೆಯಲ್ಲಿ ಆರಾಮವಾಗಿ ರೆಸ್ಟ್ ಮಾಡುವುದನ್ನು ಬಿಟ್ಟು ಹೊಟ್ಟೆಯಲ್ಲಿ ಮಗುವನ್ನು ಇಟ್ಟುಕೊಂಡು ರ್ಯಾಂಪ್ ವಾಕ್ ಮಾಡಿದ ವಿಡಿಯೋವೊಂದು ಬಾರಿ ವೈರಲ್ ಆಗುತ್ತಿದೆ. ಸದ್ಯ ತುಂಬು ಗರ್ಭಿಣಿಯ ಬೇಬಿ ಬಂಪ್ ರ್ಯಾಂಪ್ ವಾಕ್ ತೋರಿಸುವ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
https://www.instagram.com/reel/Cpuh23UoReJ/?igshid=YmMyMTA2M2Y=
ಫ್ಯಾಶನ್ ಸ್ಟೈಲಿಸ್ಟ್ ಅಂತರ ಮೊತಿವಾಲ ವರ್ವಾ ಗರ್ಭಿಣಿಯಾಗಿದ್ದರೂ ಸಹ ರ್ಯಾಂಪ್ ವಾಕ್ ಮಾಡಿದ್ದಾರೆ. ನಟ- ಬ್ಯುಸಿನೆಸ್ ಮ್ಯಾನ್ ಮೋಹಿತ್ ವರ್ವಾ ಅವರ ಪತ್ನಿ ಅಂತರ ಶುಕ್ರವಾರದಂದು ನಡೆದ ಲ್ಯಾಕ್ಮಿ ಫ್ಯಾಶನ್ ವೀಕ್ನಲ್ಲಿ ಭಾಗವಹಿಸಿದರು. ಆಗ ಬೇಬಿ ಬಂಪ್ ತೋರಿಸುತ್ತಾ ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಎರಡನೇ ಬಾರಿಗೆ ತಾಯಿಯಾಗುತ್ತಿರುವ ಮಾಡೆಲ್ ಶಮ್ರಿ ವೈಟ್ ಟಾಪ್ ಧರಿಸಿದ್ದರು. ಈ ರ್ಯಾಂಪ್ ವಾಕ್ ವಿಡಿಯೋವನ್ನು ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡು, ಅದರಲ್ಲಿ ಮಗಳಿಗಾಗಿ ವಿಶೇಷ ಸಂದೇಶವನ್ನು ಬರೆದಿದ್ದಾರೆ.