ನ್ಯೂಸ್ ನಾಟೌಟ್: ಯುವಕನೋರ್ವ ಬೇರೆಯವರ ಪತ್ನಿ ಮೇಲೆ ಕಣ್ಣು ಹಾಕಿದ್ದೂ ಅಲ್ಲದೆ, ಆಕೆಯ ಪತಿಗೆ ಪೋಟೋ ಕಳುಹಿಸಿ ತನ್ನ ಸಾವನ್ನು ತಾನೇ ತಂದುಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಪತ್ನಿಯ ಜತೆ ಲವ್ವಿ ಡವ್ವಿ ಆಡುತ್ತಿದ್ದವನನ್ನು ಪತಿ ಕೊಚ್ಚಿ ಕೊಂದು ಹಾಕಿದ್ದಾನೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಹೆಡಿಯಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೌದು, ನಂಜನಗೂಡು ತಾಲ್ಲೂಕು ಮಳೆಯೂರು ಗ್ರಾಮದ ಮಹೇಶ್ ಎಂಬಾತ ಬರ್ಬರವಾಗಿ ಕೊಲೆಯಾಗಿದ್ದು, ಅದೇ ಗ್ರಾಮದ ಗಿರೀಶ್, ಮಹೇಶ್ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲ ಕೊಲೆ ಮಾಡಿದ ನಂತರ ಗಿರೀಶ್ ತಾನೇ ಹೋಗಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.ಕೊಲೆಗೆ ಕಾರಣ ತನ್ನ ಪತ್ನಿ ಜತೆಗೆ ಮಹೇಶ್ ಹೊಂದಿದ್ದ ಸಂಬಂಧ ವೆಂದು ಹೇಳಿದ್ದಾನೆ.
ಹೌದು, ಮಹೇಶ್ ಗಿರೀಶ್ ಪತ್ನಿ ಜತೆ ಸಲುಗೆಯಿಂದ ಇದ್ದ ಮೆಸೇಜ್ ಮಾಡೋದು ಕಾಲ್ ಮಾಡೋದು ಮಾಡ್ತಾ ಇದ್ದ. ಈ ವಿಚಾರ ಗಿರೀಶ್ಗೆ ಗೊತ್ತಾಗಿ ಜಗಳ ಸಹ ಆಗಿತ್ತು. ಜಗಳ ವಿಚ್ಛೇದನದ ಹಂತ ತಲುಪಿತ್ತು. ಹಲವು ತಿಂಗಳಿನಿಂದ ಗಿರೀಶ್ ಹಾಗೂ ಪತ್ನಿ ಬೇರೆಯಾಗಿದ್ರು. ಆದ್ರೆ ಗಿರೀಶ್ ಪತ್ನಿ, ಮಹೇಶ್ ಜತೆಗಿನ ಸಂಬಂಧ ಮುಂದುವರಿಸಿದ್ದಳು. ಈ ಮಧ್ಯೆ ಸ್ವತಃ ಮಹೇಶ, ಗಿರೀಶ್ ಪತ್ನಿ ಜೊತೆಗಿದ್ದ ಪೋಟೋವನ್ನು ಗಿರೀಶ್ಗೆ ಕಳುಹಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಗಿರೀಶ, ಮಹೇಶ್ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಗಿರೀಶ್ ನೇರವಾಗಿ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಆರೋಪಿ ಗಿರೀಶ್ನನ್ನು ಬಂಧಿಸಿದ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಇದೆಲ್ಲಾ ಏನೇ ಇರಲಿ ಕೊಲೆಯಾದ ಮಹೇಶ್ ಬೇರೆಯವರ ಪತ್ನಿ ಮೇಲೆ ಕಣ್ಣು ಹಾಕಿದ್ದೂ ಅಲ್ಲದೇ, ಆಕೆಯ ಪತಿಗೆ ಪೋಟೋ ಕಳುಹಿಸಿ ತನ್ನ ಸಾವನ್ನು ತಾನೇ ತಂದುಕೊಂಡ ಅಂದರೂ ತಪ್ಪಾಗಲಾರದು.