ನ್ಯೂಸ್ ನಾಟೌಟ್ : ಯುವಕನೋರ್ವ ಮನೆಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಪಲ ಮೂರುಕಟ್ಟೆ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಕುಂಪಲ ಮೂರುಕಟ್ಟೆ ನಿವಾಸಿ ಅಕ್ಷಯ್ (25) ಆತ್ಮಹತ್ಯೆಗೈದ ದುರ್ದೈವಿ. ಅಕ್ಷಯ್ ತೊಕ್ಕೊಟ್ಟಿನ ಅನು ಮೊಬೈಲ್ ಸೆಂಟರಲ್ಲಿ ಕೆಲಸಕ್ಕಿದ್ದು, ಕಳೆದ 20 ದಿವಸಗಳಿಂದ ಕೆಲಸಕ್ಕೆ ತೆರಳದೆ ಮನೆಯಲ್ಲೇ ಇದ್ದ ಎಂದು ತಿಳಿದುಬಂದಿದೆ. ಮೊಬೈಲ್ ಶಾಪ್ ಮಾಲಕರು ಕರೆ ಮಾಡಿದರೂ ಅಕ್ಷಯ್ ಕರೆ ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿದೆ. ಇಂದು ಬೆಳಗ್ಗೆ ಅಕ್ಷಯ್ ತಾಯಿ, ಮನೆ ಹತ್ತಿರದ ಬೀಡಿ ಬ್ರಾಂಚಿಗೆ ತೆರಳಿದ್ದ ವೇಳೆ ಮನೆಯ ಹಾಲಿನ ಕಿಟಕಿಗೆ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದಾನೆ.
ಖಿನ್ನತೆಯಿಂದ ಅಕ್ಷಯ್ ಆತ್ಮ ಹತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ. ಮೃತ ಅಕ್ಷಯ್ ತಾಯಿ, ಇಬ್ಬರು ಸಹೋದರಿಯರನ್ನ ಅಗಲಿದ್ದಾರೆ. ಉಳ್ಳಾಲ ಪೊಲೀಸರು ಮೃತದೇಹವನ್ನುಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ.