ನ್ಯೂಸ್ ನಾಟೌಟ್: ದೈತ್ಯ ಗಾತ್ರದ ಮೊಸಳೆಯೊಂದು ರಸ್ತೆಯಿಂದ ಇನ್ನೊಂದು ಬದಿಗೆ ಹೋಗುವ ಸಲುವಾಗಿ ಅಲ್ಲಿದ್ದ ಲೋಹದ ಬೇಲಿಯನ್ನೇ ತುಂಡರಿಸಿ ನುಗ್ಗುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮೊಸಳೆ ಬಲಶಾಲಿಯಾದ ಬೇಲಿಯನ್ನು ಕಷ್ಟಪಟ್ಟು ತುಂಡು ಮಾಡುತ್ತಿರುವುದನ್ನು ನೋಡಬಹುದು. ರೆಕ್ಸ್ ಚಾಪ್ಮನ್ ಅವರು ಟ್ವಿಟರ್ ನಲ್ಲಿ ಹಂಚಿಕೊಂಡ ಈ ವಿಡಿಯೋವನ್ನು ಫ್ಲೋರಿಡಾದಲ್ಲಿ ಚಿತ್ರೀಕರಿಸಲಾಗಿದೆ.
ಇದನ್ನು ಮೂಲತಃ ಮ್ಯಾಟ್ ಡೆವಿಡ್ ಎಂಬವರು ಪೋಸ್ಟ್ ಮಾಡಿದ್ದರು. ಪುರುಷರು ಈಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಸಮಯ, ಅವರಿಗಿಂತಲೂ ಬಲಿಷ್ಠವಾದ ಶಕ್ತಿಯೊಂದು ಹೊಳೆಯುತ್ತಿದೆ ಎಂದು ಶೀರ್ಷಿಕೆ ಕೊಟ್ಟು ಇದನ್ನು ಪೋಸ್ಟ್ ಮಾಡಲಾಗಿತ್ತು. ಇದರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮೊಸಳೆಯೊಂದು ಸಕಲ ಶಕ್ತಿ ಪ್ರದರ್ಶನ ಮಾಡಿ ಬೇಲಿ ಮುರಿಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ನಂತರ ಸರಳುಗಳನ್ನು ಬಗ್ಗಿಸಲು ಕೊನೆಗೂ ಯಶಸ್ವಿಯಾಗಿದೆ.ಈ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.