ನ್ಯೂಸ್ನಾಟೌಟ್ : ಸುಳ್ಯ ಗುರುಂಪು ಬಳಿ ಬರೆ ಕುಸಿದು ಮೂವರು ಮೃತಪಟ್ಟ ಘಟನಾ ಸ್ಥಳಕ್ಕೆ ಶನಿವಾರ ಕೆ.ಪಿ.ಸಿ.ಸಿ ವಕ್ತಾರ ಟಿ.ಎಂ. ಶಹೀದ್ ತೆಕ್ಕಿಲ್ ಭೇಟಿ ನೀಡಿದರು. ಘಟನೆಯಿಂದ ಜೀವ ಕಳೆದುಕೊಂಡ ವಲಸೆ ಕಾರ್ಮಿಕರ ಕುಟುಂಬಕ್ಕೆ ತಲಾ 10 ಲಕ್ಷ ರೂ.ಪರಿಹಾರ ಒದಗಿಸಬೇಕೆಂದು ಟಿ.ಎಂ ಶಹೀದ್ ತೆಕ್ಕಿಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗುರುಂಪು ಬಳಿ ಕಟ್ಟಡದ ಪಿಲ್ಲರ್ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭ ಬರೆ ಕುಸಿದು ಕಾರ್ಮಿಕರಾದ ಗದಗದ ಮುಂಡರಗಿಯ ಸೋಮಶೇಖರ್, ಶಾಂತ ದಂಪತಿ ಹಾಗೂ ಮತ್ತೊರ್ವನ ಕುಟುಂಬಕ್ಕೆ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ತಲಾ ರೂ 10 ಲಕ್ಷ ಪರಿಹಾರವನ್ನು ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.