ನ್ಯೂಸ್ ನಾಟೌಟ್: ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ 1912ರಲ್ಲಿ ಮುಳುಗಡೆಯಾದ ಬೃಹತ್ ಹಡಗು ಟೈಟಾನಿಕ್ ನ ಅವಶೇಷಗಳ ಅಪರೂಪದ ವೀಡಿಯೊವನ್ನು ಬಿಡುಗಡೆಗೊಳಿಸಲಾಗಿದೆ.ಬ್ರಿಟನ್ ನ ಈ ಹಡಗಿನ ಅವಶೇಷಗಳು ಅಟ್ಲಾಂಟಿಕ್ ಮಹಾಸಾಗರದ ನೆಲದ ಮೇಲೆ, ಸಮುದ್ರದ ಮೇಲ್ಮೈಯಿಂದ ಸುಮಾರು 3 ಕಿ.ಮೀ ಆಳದಲ್ಲಿ ಬಿದ್ದಿರುವುದು ಈ ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
17 ಅಂತಸ್ತಿನ ಕಟ್ಟಡದಷ್ಟು ಎತ್ತರ, ಮೂರು ಫೂಟ್ಬಾಲ್ ಮೈದಾನದಷ್ಟು ಎತ್ತರ ಮತ್ತು 3,500 ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿರುವ ಈ ಹಡಗು ನಿರ್ಮಾಣಕ್ಕೆ ಒಟ್ಟು 26 ತಿಂಗಳುಗಳನ್ನು ತೆಗೆದುಕೊಂಡಿತು. ಈ ನೌಕೆಯನ್ನು 26 ತಿಂಗಳಲ್ಲಿ ಪೂರ್ಣಗೊಳಿಸುವುದರ ಹಿಂದೆ 3000 ಜನರ ಪರಿಶ್ರಮವಿದೆ.ಅಮೆರಿಕದ ವುಡ್ಸ್ಹೋಲ್ ಓಶಿಯಾನೊಗ್ರಾಫಿಕ್ ಇನ್ಸ್ಟಿಟ್ಯೂಷನ್(WHOI)ನ ತಂಡವು 1986ರಲ್ಲಿ ಈ ವೀಡಿಯೊವನ್ನು ಸೆರೆಹಿಡಿದಿದೆ ಎನ್ನಲಾಗಿದೆ. ಈ ಹಡಗು ಮಂಜುಗಡ್ಡೆಯನ್ನು ಹೊಡೆದಾಗ, ಅದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಎರಡು ತುಣುಕುಗಳು ಪರಸ್ಪರ 600 ಮೀಟರ್ಗಳಷ್ಟು ದೂರದಲ್ಲಿವೆ. ಈ ಹಡಗು ಹೇಗೆ ಎರಡು ಭಾಗವಾಯಿತು? ಇದುವರೆಗೂ ನಿಗೂಢವಾಗಿಯೇ ಉಳಿದಿದೆ. ಹಡಗು 1912 ರಲ್ಲಿ ಮುಳುಗಿತು ಆದರೆ 1985 ರಲ್ಲಿ ಮಾತ್ರ ಪತ್ತೆಯಾಗಿದೆ. ಅಂದರೆ ಅದನ್ನು ಹುಡುಕಲು ಸುಮಾರು 73 ವರ್ಷಗಳು ಬೇಕಾಯಿತು.
1985ರ ಸೆಪ್ಟಂಬರ್ 1ರಂದು ಡಬ್ಲ್ಯುಎಚ್ಒಐ ಮತ್ತು ಫ್ರೆಂಚ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶಿಯಾನೊಗ್ರಫಿಯ ತಂಡವು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ನೀರಿನಡಿಯ ಕ್ಯಾಮೆರಾ ಬಳಸಿ ಟೈಟಾನಿಕ್ ನ ಅವಶೇಷಗಳನ್ನು ಸಮುದ್ರದ ತಳಭಾಗದಲ್ಲಿ, 12,400 ಅಡಿಗಳಷ್ಟು ಕೆಳಗೆ ಪತ್ತೆಹಚ್ಚಲಾಗಿದೆ.ಇದೀಗ ಜೇಮ್ಸ್ ಕ್ಯಾಮರೂನ್ ಅವರ ನಿರ್ದೇಶನದಲ್ಲಿ 1997ರಲ್ಲಿ ಬಿಡುಗಡೆಗೊಂಡಿದ್ದ ಟೈಟಾನಿಕ್ ಸಿನಿಮಾವನ್ನು ಮರುಬಿಡುಗಡೆಗೊಳಿಸುವ ಸಂದರ್ಭದಲ್ಲೇ ಟೈಟಾನಿಕ್ ನ ಅಪರೂಪದ ಅವಶೇಷಗಳನ್ನೂ ಬಿಡುಗಡೆಗೊಳಿಸಲಾಗುತ್ತಿದೆ