ನ್ಯೂಸ್ ನಾಟೌಟ್: ಬಿಲಿಯನ್ ಡಾಲರ್ ಉದ್ಯಮಿ, ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಸಿಇಒ ಓರ್ವ ವಿಶೇಷ ವ್ಯಕ್ತಿಯನ್ನು ನೇಮಿಸಿಕೊಂಡಿದ್ದಾರೆ. ಅದು ಅವರ ಪ್ರೀತಿಯ ನಾಯಿ.! ಹೌದು.
ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ತಮ್ಮ ಸಾಕು ನಾಯಿಯನ್ನು ಟ್ವಿಟರ್ ಸಿಇಒಯನ್ನಾಗಿ ನೇಮಿಸಿಕೊಂಡಿದ್ದಾರೆ ಎಂದು ಸ್ವತಃ ಎಲಾನ್ ಮಸ್ಕ್ ಅವರೇ ಈ ಬಗ್ಗೆ… ಟ್ವಿಟರ್ ಸಂಸ್ಥೆಯ ಹೊಸ ಸಿಇಒ ಎಂದು ಟ್ವೀಟ್ ಮಾಡಿದ್ದಾರೆ.
ಶಿಬಾ ಇನು ತಳಿಯ ಮಸ್ಕ್ ಅವರ ಫ್ಲೋಕಿ ಎನ್ನುವ ನಾಯಿಯನ್ನು ತಮ್ಮ ಸಿಇಒ ಕುರ್ಚಿ ಮೇಲೆ ಕೂರಿಸಿ, ನಾಯಿಯ ಮುಂದೆ ಹಲವು ಫೈಲ್ ಗಳನ್ನು ಇಟ್ಟು, ಈತ ಹೊಸ ಸಿಇಒ, ಯಾವುದೇ ಇತರ ವ್ಯಕ್ತಿಗಿಂತ ಈತನೇ ಬೆಸ್ಟ್ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಮಸ್ಕ್ ಅವರ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಸ್ಕ್ ಟ್ವಿಟರ್ ಕೊಂಡ ಬಳಿಕ ಭಾರತ ಮೂಲದ ಪರಾಗ್ ಅಗರವಾಲ್ ಅವರನ್ನು ಸಿಇಒ ಸ್ಥಾನದಿಂದ ವಜಾಗೊಳಿಸಿದ್ದರು. ಇದರೊಂದಿಗೆ ಅನೇಕ ಉದ್ಯೋಗಿಗಳನ್ನೂ ಕೆಲಸದಿಂದ ವಜಾ ಮಾಡಲಾಗಿತ್ತು.