ನ್ಯೂಸ್ನಾಟೌಟ್: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದ್ದ ಕೇರಳದ ತೃತೀಯಲಿಂಗಿ ದಂಪತಿಗೆ ಬುಧವಾರ ಕೇರಳದ ಕೋಯಿಕ್ಕೋಡ್ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಜನಿಸಿದೆ.
ಸಿಸೇರಿಯನ್ ಹೆರಿಗೆ ಮೂಲಕ ಮಗುವನ್ನು ಹೊರ ತೆಗೆಯಲಾಗಿದ್ದು, ತೃತೀಯಲಿಂಗಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಮಗುವಿನ ಲಿಂಗವನ್ನು ಬಹಿರಂಗಪಡಿಸಲು ದಂಪತಿ ನಿರಾಕರಿಸಿದ್ದಾರೆ.
ತೃತೀಯಲಿಂಗಿ ಗರ್ಭ ಧರಿಸಿರುವುದು ದೇಶದಲ್ಲೇ ಇದೇ ಮೊದಲ ಪ್ರಕರಣವಾಗಿದೆ. ಜಹಾದ್ ಫಾಜಿಲ್ ಮತ್ತು ಜಿಯಾ ಪೊವೆಲ್ ಇಬ್ಬರು ಕೇರಳದ ತೃತೀಯಲಿಂಗಿ ದಂಪತಿ. ಜಹಾನ್ ಫಾಜಿನ್ ಇತ್ತೀಚೆಗಷ್ಟೇ 8 ತಿಂಗಳ ಗರ್ಭ ಧರಿಸಿರುವುದಾಗಿ ಘೋಷಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು. ಜಿಯಾ ಪೊವೆಲ್ ಡ್ಯಾನ್ಸರ್ ಆಗಿದ್ದು, ಕೇರಳದಲ್ಲಿ ಖ್ಯಾತಿಯಾಗಿದ್ದಾರೆ. ಈಗ ತನ್ನ ಸಂಗಾತಿ ಫಾಜಿಲ್ ಜತೆ ಹೊಂದುವ ಮೂಲಕ ಮತ್ತೊಮ್ಮೆಸುದ್ದಿಯಲ್ಲಿದ್ದಾರೆ.