ನ್ಯೂಸ್ ನಾಟೌಟ್: ತಮಿಳು ಮತ್ತು ಕೊರಿಯಾ ಮೂಲದ ಸಿನೆಮಾಗಳಲ್ಲಿ ಮನುಷ್ಯರು ಜೋಂಬಿಗಳಂತಾಗುವ ದೃಶ್ಯ ವನ್ನೂ ನೋಡಿರುತ್ತೇವೆ. ಆದರೆ ಜೋಂಬಿ ಎನ್ನುವ ಪರಿಕಲ್ಪನೆಯೇ ಇಂದು ಅಮೆರಿಕದಲ್ಲಿ ಜೋಂಬಿ ನಿಜವಾಗಿ ಬಿಟ್ಟಂತಿದೆ!
ಇತ್ತೀಚೆಗಷ್ಟೇ ಫಿಲಡೆಲ್ಫಿಯಾದಲ್ಲಿ ರಸ್ತೆಯಲ್ಲೇ ಮಹಿಳೆಯೊಬ್ಬರು ಜೋಂಬಿಯಂತೆ ವರ್ತಿಸಿದ್ದ ವೀಡಿಯೋ ವೈರಲ್ ಆಗಿತ್ತು. ಅಲ್ಲದೇ ಜನರ ಚರ್ಮ ಕೂಡ ಜೋಂಬಿಗಳಂತೆ ಕೊಳೆಯುತ್ತಿರುವುದು ಆರೋಗ್ಯ ತಜ್ಞರಲ್ಲಿ ಆತಂಕ ಮೂಡಿಸಿದೆ. ಇದಕ್ಕೆಲ್ಲ ಕಾರಣ “ಜೋಂಬಿ ಡ್ರಗ್’. ಡ್ರಗ್ ಓವರ್ಡೋಸ್ ಆಗುತ್ತಿದ್ದಂತೆ ಹಲವು ರೀತಿಯ ಸಮಸ್ಯೆ ಎದುರಾಗುತ್ತದೆ. ತೀವ್ರ ನಿದ್ರೆ, ಖನ್ನತೆ, ಮೈ ಮೇಲಿನ ನಿಯಂತ್ರಣ ತಪ್ಪು ವುದು ವರದಿಯಾಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಜನರು ಜೋಂಬಿಗಳ ರೀತಿಯೇ ವರ್ತಿಸುತ್ತಿದ್ದು, ಈ ಔಷಧ ಮನುಷ್ಯರನ್ನು ಜೋಂಬಿಗಳಾಗಿ ಪರಿವರ್ತಿಸುತ್ತಿದೆಯೇ ಎನ್ನುವ ಆತಂಕವೂ ಮೂಡಿದೆ. ಡ್ರಗ್ ಓವರ್ಡೋಸ್ನಿಂದ 2020ರಲ್ಲಿ ಮೃತಪಟ್ಟವರಲ್ಲಿ ಶೇ.6.7 ಮಂದಿಯಲ್ಲಿ ಕ್ಸೆ„ಲಾಜಿನ್ ಅಂಶವಿರುವುದು ಪತ್ತೆಯಾಗಿತ್ತು. ಈಗ ಮತ್ತೆ ಅದರ ಅಕ್ರಮ ಬಳಕೆ ಹೆಚ್ಚಾಗಿರುವುದು ವರದಿಯಾಗಿದೆ.
ಕ್ಸೆ„ಲಾಜಿನ್ ಅಥವಾ ಜೋಂಬಿ ಡ್ರಗ್ ಎನ್ನುವ ಔಷಧವನ್ನು ಪ್ರಾಣಿಗಳಿಗೆ ಮಾತ್ರ ಬಳಸಲು ಪ್ರಮಾಣೀಕರಿಸಲಾಗಿದೆ. ಆದರೆ ನಿಷೇಧಿತ ಮಾದಕವಸ್ತುಗಳಲ್ಲಿಯೂ ಈ ಡ್ರಗ್ ಅನ್ನು ಅಕ್ರಮವಾಗಿ ಬಳಸುತ್ತಿರುವುದು ವರದಿಯಾಗಿದೆ. ಮನುಷ್ಯರು ಇದರ ಬಳಿಯಿರುವ ಮಾದಕ ವಸ್ತುಗಳನ್ನು ಸೇವಿಸು ತ್ತಿದ್ದಂತೆ ಡ್ರಗ್ ಓವರ್ ಡೋಸ್ ಆಗಿ ಸಾಯುತ್ತಿದ್ದಾರೆ.