ನ್ಯೂಸ್ ನಾಟೌಟ್ : ಬಾಳೆ ಗಿಡಗಳನ್ನು ನೆಟ್ಟು ಮೊದಲು ಬಾಳೆ ಎಲೆಗಳು ಬಂದು ನಂತರ ಹೂ ಬಿಟ್ಟು ಬಾಳೆಗೊನೆ ಬಿಡುವುದು ಸಹಜ. ಆದರೆ ಕಡಿದ ಬಾಳೆ ದಿಂಡಿನಲ್ಲಿ ಬಾಳೆ ಎಲೆ ಬಿಡದೇ ಬಾಳೆಗೊನೆ ಬಿಟ್ಟಿದ್ದು ವಿಚಿತ್ರ ಆದರೂ ಸತ್ಯ..ಈ ಘಟನೆ ಕಂಡು ಬಂದಿದ್ದು ಗೂನಡ್ಕದ ದೊಡ್ಡಡ್ಕದಲ್ಲಿ. ಈ ಬಾಳೆ ಕಂಬದಲ್ಲಿ ಬಾಳೆಗೊನೆ ಬಿಟ್ಟಿದ್ದು ವಿಶೇಷ.
ಈ ವಿಸ್ಮಯ ಕಂಡು ಬಂದಿದ್ದು ಸುಳ್ಯ ತಾಲೂಕಿನ ದೊಡ್ಡಡ್ಕದ ಅವಿನ್ ಮಿಲ್ಕ್ ಶಾಪ್ ನ ಹಿಂದೆ ಇರುವ ಮನೆಯೊಂದರಲ್ಲಿ.ಪುಟ್ಟು ಎಂಬವರು ಕಳೆದ ವರ್ಷ ಗಿಡ ನೆಟ್ಟಿದ್ದು ಅದು ಬಾಳೆಗೊನೆ ಬಿಟ್ಟ ಬಳಿಕ ಕಳೆದ ಮೂರು ತಿಂಗಳ ಹಿಂದೆ ಬಾಳೆಗೊನೆಯನ್ನು ಕಡಿದು,ಬಾಳೆಗಿಡವನ್ನು ಕೂಡ ಕಡಿದಿದ್ದರು.
ಇದೀಗ ಕಳೆದ ೧೫ ದಿನಗಳಿಂದ ಬಾಳೆ ದಿಂಡಿನಲ್ಲಿ ಬಾಳೆಗೊನೆ ಬಿಟ್ಟಿದ್ದು ವಿಶೇಷವಾಗಿದೆ.ಪ್ರಕೃತಿ ವಿಸ್ಮಯ ಕಂಡು ಎಲ್ಲರೂ ಬೆರಗಾಗಿದ್ದಾರೆ.ಈ ಪೋಟೋವನ್ನು ಸಮೀಪದ ಮನೆಯವರೊಬ್ಬರು ನ್ಯೂಸ್ ನಾಟೌಟ್ ಜತೆಗೆ ಹಂಚಿಕೊಂಡಿದ್ದಾರೆ.