ನ್ಯೂಸ್ ನಾಟೌಟ್ : ಮದುವೆ ದಿನವೇ ಹೃದಯಾಘಾತಕ್ಕೀಡಾಗಿ ವಧು ಸಾವನ್ನಪ್ಪಿದ ಘೋರ ದುರಂತ ಗುಜರಾತಿನ ಭಾವನಗರದ ಮಹಾದೇವ ದೇವಸ್ಥಾನದಲ್ಲಿ ನಡೆದಿದೆ.
ಹೇತಾಳ್ ಮೃತ ಮಧುಮಗಳು ಎಂದು ಗುರುತಿಸಲಾಗಿದೆ.ಹೀತಲ್ ಮತ್ತು ವಿಶಾಲ್ ಎಂಬ ಯುವಕನ ಮದುವೆ ದಿನಾಂಕ ನಿನ್ನೆ ನಿಗದಿಯಾಗಿತ್ತು.ಮದುವೆ ಹಾಲ್ ಗೆ ಅತಿಥಿಗಳು ಆಗಮಿಸಿದ್ದರು.ಹಿನ್ನಲೆ ಸಂಗೀತದೊಂದಿಗೆ ಮದುವೆ ಆಚರಣೆ ಅದ್ದೂರಿಯಾಗಿ ನಡೆದಿತ್ತು.ಮದುವೆ ಪೂಜಾ ವಿಧಾನಗಳು ಆರಂಭವಾದ ಬಳಿಕ ಹೇತಾಲ್ ಗೆ ತಲೆ ಸುತ್ತು ಬರಲು ಆರಂಭವಾಗಿದೆ.ತಕ್ಷಣವೇ ಪ್ರಜ್ಞೆ ಕಳೆದುಕೊಂಡಿದ್ದಾಳೆ.ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ದುರದೃಷ್ಟವಶಾತ್ ಬದುಕಿ ಬರಲಿಲ್ಲ.ಆಕೆ ಹೃದಯಾಘಾತಗೊಂಡು ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಈ ವೇಳೆ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದ್ದರೂ,ಮದುವೆ ಆಚರಣೆಯನ್ನು ಮುಂದುವರಿಸಲು ಸಂಬಂಧಿಕರು ಪರ್ಯಾಯ ಯೋಜನೆಯನ್ನು ಪ್ರಸ್ತಾಪಿಸಿದರು.ವಧುವಿನ ತಂಗಿಯನ್ನು ವರನಿಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸಿದರು.ಹೇತಲ್ ಶವವನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಇರಿಸಿ ಬೇಸರದಲ್ಲಿಯೇ ಮದುವೆ ಮಾಡಿಸಿದರು.