ನ್ಯೂಸ್ ನಾಟೌಟ್: ಸಾವು ಯಾವಾಗ ಹೇಗೆ ಬರುತ್ತದೆ ಎಂದು ಯಾರಿಗೂ ಊಹಿಸಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಲ್ಲೂ ಸಾವಿನ ಸಂಖ್ಯೆ ಹೆಚ್ಚಾಗಿದೆ. ಈಗಿನ ಯುವಕರು ಫಿಟ್ನೆಸ್ ಬಗ್ಗೆ ಹೆಚ್ಚು ಆಸಕ್ತಿ ವಹಿಸಿಕೊಂಡಿರುತ್ತಾರೆ. ಹೀಗೆ ವಿಪರೀತ ವರ್ಕೌಟ್ ಮಾಡ್ತಿದ್ದ ದೇಹದಾರ್ಢ್ಯ ಪಟು ರೊಟ್ಟಿ ತಿನ್ನುವಾಗ ಗಂಟಲ್ಲಿ ಸಿಲುಕಿ ಮೃತಪಟ್ಟ ಘಟನೆ ಭಾನುವಾರ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಕಡಲೂರು ಜಿಲ್ಲೆಯ ವಡ್ಲೂರಿನಲ್ಲಿ ಹರಿಹರನ್ ಸೇಲಂ ಜಿಲ್ಲೆಯ ಪೆರಿಯಾ ಕೊಲ್ಲಪಟ್ಟಿ ನಿವಾಸಿ 21ರ ಹರೆಯದ ಎಂ.ಹರಿಹರನ್ ರಾಜ್ಯ ಮಟ್ಟದ ದೇಹದಾರ್ಢ್ಯ ಚಾಂಪಿಯನ್ ಶಿಪ್ಗೆ ಮುನ್ನ ತರಬೇತಿ ಪಡೆಯುತ್ತಿದ್ದರು. ವರ್ಕೌಟ್ ಸಮಯದಲ್ಲಿ ಬಿಡುವು ಮಾಡಿಕೊಂಡು ರೊಟ್ಟಿ ತಿನ್ನುತ್ತಿದ್ದರು. ಈ ಸಂದರ್ಭ ರೊಟ್ಟಿಯ ಚೂರು ಗಂಟಲಲ್ಲಿ ಸಿಲುಕಿಕೊಂಡು ಉಸಿರಾಡಲಾಗದೆ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅವರು 70 ಕೆಜಿ ವಿಭಾಗದ ದೇಹದಾರ್ಢ್ಯ ಪಟು ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಯಾಗಿದ್ದರು. ಈ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ವಿವಿಧ ರಾಜ್ಯಗಳಿಂದ ಸ್ಪರ್ಧಿಗಳು ಕಡಲೂರಿಗೆ ಬಂದಿದ್ದರು. ಅವರೆಲ್ಲರೂ ಮದುವೆ ಮಂಟಪದಲ್ಲಿ ತಂಗಿದ್ದರು. ಭಾನುವಾರ ರಾತ್ರಿ 8 ಗಂಟೆಗೆ ಹರಿಹರನ್ ವರ್ಕೌಟ್ ಮಾಡುತ್ತಿದ್ದರು. ಈ ಸಂದರ್ಭ ರೊಟ್ಟಿ ತಿನ್ನುವಾಗ ಈ ಘಟನೆ ಸಂಭವಿಸಿದೆ. ಇದರಿಂದ ಅವರಿಗೆ ಉಸಿರಾಡಲೂ ಸಾಧ್ಯವಾಗದೆ ಸ್ವಲ್ಪ ಹೊತ್ತಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಹೆಚ್ಚು ಹಸಿವಿನಿಂದ ಬಳಲುತ್ತಿರುವಾಗ ಜಾಗರೂಕತೆಯಿಂದ ಆಹಾರ ಸೇವಿಸಬೇಕು. ಈ ಸಂದರ್ಭ ಬೇಗ ಬೇಗ ತಿಂದರೆ ಘನವಸ್ತುಗಳು ಕೆಲವೊಮ್ಮೆ ಗಂಟಲಲ್ಲಿ ಸಿಲುಕಿಕೊಂಡು ಆಹಾರ ಶ್ವಾಸನಾಳ ಪ್ರವೇಶಿಸಿ ಸಾವು ಸಂಭವಿಸುವ ಸಾಧ್ಯತೆಯಿದೆ.