ನ್ಯೂಸ್ ನಾಟೌಟ್ : ಎಲೆಕ್ಷನ್ ಹತ್ತಿರ ಬರುತ್ತಿದೆ. ಲಾಠಿ ಹಿಡಿದು ನಮ್ಮ ಪೊಲೀಸರು ಕೂಡಾ ಸಿದ್ಧವಾಗುತ್ತಿದ್ದಾರೆ.ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಪೊಲೀಸರು ಸುಳ್ಯದ ಗಾಂಧಿನಗರದ ಶಾಲಾ ಮೈದಾನದಲ್ಲಿ ವಿಶೇಷ ತರಬೇತಿ ಪಡೆಯುವುದರ ಮೂಲಕ ಸಾಮರ್ಥ್ಯ ಪರೀಕ್ಷಿಸಿಕೊಂಡರು.
೭೦ಕ್ಕೂ ಹೆಚ್ಚು ಸಿಬ್ಬಂದಿ ಭಾಗಿ:
ಕಾರ್ಯಕ್ರಮದಲ್ಲಿ ಸುಮಾರು ೭೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿವರ್ಗ , ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು. ಸುಬ್ರಹ್ಮಣ್ಯ,ಬೆಳ್ಳಾರೆ, ಸುಳ್ಯ ಪೊಲೀಸ್ ಠಾಣೆಗೆ ಸೇರಿದ ಪೊಲೀಸ್ ಸಿಬ್ಬಂದಿ , ಪೊಲೀಸ್ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತರಬೇತಿಯನ್ನು ಪಡೆದುಕೊಂಡರು.ತುರ್ತು ಸಂದರ್ಭಗಳಲ್ಲಿ ಮತ್ತು ಯಾವುದೇ ಗಲಾಟೆ,ಕಲ್ಲು ತೂರಾಟ ಹಾಗೂ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವುದರ ಜತೆಗೆ , ಗುಂಪುಗಳನ್ನು ಹೇಗೆ ಚದುರಿಸಬೇಕು ಎನ್ನುವುದರ ಬಗ್ಗೆ ಈ ತರಬೇತಿ ಶಿಬಿರ ತುಂಬಾನೇ ಸಹಕಾರಿಯಾ ಗಲಿದೆ.ಇದರ ಜತೆಗೆ ಮುಂಬರುವ ಚುನಾವಣೆಗೆ ತಯಾರಿಯನ್ನು ಮಾಡಿಕೊಳ್ಳುವುದನ್ನು ಈ ತರಬೇತಿ ಶಿಬಿರದಲ್ಲಿ ಮಾಹಿತಿಯನ್ನು ಪೊಲೀಸ್ ಸಿಬ್ಬಂದಿ ವರ್ಗಕ್ಕೆ ನೀಡಲಾಗುತ್ತಿದೆ.
೨ ಗಂಟೆಗಳ ಕಾಲ ತರಬೇತಿ :
ಮಂಗಳೂರು ವಿಭಾಗದ ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ಕೆ ಎಸ್ ತರಬೇತಿಯನ್ನು ನೀಡಿ ಪೊಲೀಸರ ಸ್ವಯಂ ರಕ್ಷಣಾ ವ್ಯಾಯಮಗಳನ್ನು ಮತ್ತು ಅನುಸರಿಸಬೇಕಾದ ರಕ್ಷಣಾ ಕವಚಗಳ ಬಳಕೆಗಳ ಬಗ್ಗೆ ಮಾಹಿತಿ ನೀಡಿದರು. ಸುಮಾರು ೨ ಗಂಟೆಗಳ ಕಾಲ ತರಬೇತಿ ಶಿಬಿರ ಕಾರ್ಯಕ್ರಮ ನಡೆಯಿತು.ಇದು ರುಟೀನ್ ವರ್ಕ್, ಯಾವಾಗ ಪ್ರಾಕ್ಟೀಸ್ ಬೇಕಾಗುತ್ತೋ ಟೈಮ್ ಸಿಕ್ಕಿದಾಗಲೆಲ್ಲ ಈ ತರಹದ ಕಾರ್ಯಕ್ರಮಗಳನ್ನು ನಡೆಯುತ್ತಿದ್ದು, ಎಲೆಕ್ಷನ್ ಬರುತ್ತಿರುವುದರಿಂದ ಮಾಬ್ ಆಪರೇಷನ್ ಗಳಲ್ಲಿ ಅನುಕೂಲ ಆಗಿರುವ ಟ್ರೈನಿಂಗ್ ಇದಾಗಿದೆ.
ಈ ಸಂದರ್ಭ, ಸುಳ್ಯ ವೃತ್ತ ನಿರೀಕ್ಷಕ ರವೀಂದ್ರ, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್, ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ ಸುಹಾಸ್, ಮಂಗಳೂರು ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್ ಸಹದೇವ್, ಮಂಗಳೂರು ರೀಸರ್ವ್ ಪೊಲೀಸ್ ಕಚೇರಿ ಆರ್ ಎಸ್ ಐ ಗಳಾದ ಹನುಮಂತ , ಗಣೇಶ್,ಉದಯ್, ಸಿಬ್ಬಂದಿ ಗೌತಮ್, ಸುರೇಶ್,ಶಾನ್ ಹಾಗೂ ಸುಳ್ಯ ಪೊಲೀಸ್ ಠಾಣಾ ಎ ಎಸ್ ಐ , ಸಿಬ್ಬಂದಿ ಉಪಸ್ಥಿತರಿದ್ದರು.