ನ್ಯೂಸ್ ನಾಟೌಟ್ : ಅಪ್ರಾಪ್ತ ಬಾಲಕಿಯೋರ್ವಳು ಶಾಲೆ ಬಿಟ್ಟು ಮನೆಗೆ ಹಿಂತಿರುಗುತ್ತಿದ್ದಾಗ ವ್ಯಕ್ತಿಯೊಬ್ಬ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಬೆಳ್ಳಾರೆಯ ಮುಸ್ಲಿಂ ಮುಖಂಡನೋರ್ವನ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ.ನೆರೆ ಮನೆ ನಿವಾಸಿ ಅಶ್ರಫ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿನಿಯ ಮನೆ ಸಮೀಪದಲ್ಲಿಯೇ ಆರೋಪಿ ಮನೆ ಇದ್ದು ರಾತ್ರಿ ಸಮಯ ತಾಯಿ ಮೊಬೈಲಿನಿಂದ ಕರೆ ಮಾಡಿ ಮಾತನಾಡುವಂತೆ ಒತ್ತಾಯ ಮಾಡಿದ್ದಾನೆ ಎನ್ನಲಾಗಿದೆ. ಇದರಿಂದ ಭಯಗೊಂಡ ಬಾಲಕಿ ಶಾಲೆಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಳು ಎಂದು ಆಕೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಅಶ್ರಫ್ ಯಾನೆ ಅಚ್ಚಪ್ಪು ಎಂದು ಗುರುತಿಸಲಾಗಿದೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಲಂ 354(D), 509 ಐಪಿಸಿ ಮತ್ತು ಕಲಂ 12 ಫೋಕ್ಸೋ ಆಕ್ಟ್ 2012 ಪ್ರಕರಣ ದಾಖಲಾಗಿದೆ.