ನ್ಯೂಸ್ ನಾಟೌಟ್: ಪತ್ನಿ ಮತ್ತೊಬ್ಬರ ಜತೆ ಸಂಬಂಧ ಇಟ್ಟುಕೊಂಡಿದ್ದಾಳೆ ಅನ್ನುವ ಅನುಮಾನದೊಂದಿಗೆ ಪತಿರಾಯ ಕಾರನ್ನು ತಡೆದು ನಿಲ್ಲಿಸಿ ಪತ್ನಿ ಹಾಗೂ ಬಿಜೆಪಿ ಮುಖಂಡರೊಬ್ಬರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವಂತಹ ಘಟನೆ ವರದಿಯಾಗಿದೆ. ಈ ಸಂಬಂಧಪಟ್ಟ ಫೋಟೋ, ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪುಣಚ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ, ಕೇಪು ಗ್ರಾಮದ ಮುಳಿಯಾಲ ಮುಗೇರು ನಿವಾಸಿ ಯಾದವ್ ಹಾಗೂ ತನ್ನ ಪತ್ನಿಯ ವಿರುದ್ಧ ಸುಧೀರ್ ಎಂಬವರು ಪುತ್ತೂರು DYSPಗೆ ದೂರು ನೀಡಿದ್ದಾರೆ. ಸುಧೀರ್ ದಂಪತಿಗಳಿಗೆ 8 ವರ್ಷದ ಹೆಣ್ಣು ಮಗು ಇದೆ. ಅಧೀಕೃತವಾಗಿ ವಿಚ್ಛೇದನ ಆಗಿರಲಿಲ್ಲ. ಈ ನಡುವೆ ಒಡಿಯೂರು ಜಾತ್ರೆಗೆಂದು ಕಾವ್ಯಶ್ರೀ ಹೋಗಿದ್ದು ಈ ವೇಳೆ ಅನೈತಿಕ ಸಂಬಂಧವನ್ನು ನಡೆಸುವ ದುರುದ್ದೇಶದಿಂದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ತನ್ನ ಕಾರಿನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಈ ವಿಷಯ ತಿಳಿದ ಸುಧೀರ್ ಬೈಕಿನಲ್ಲಿ ಪುತ್ತೂರಿನಿಂದ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಸುಳ್ಯ ತಾಲೂಕಿನ ಜಾಲ್ಸೂರು ಎಂಬಲ್ಲಿ ಇಬ್ಬರು ಹೋಗುತ್ತಿದ್ದ ಕಾರನ್ನು ನಿಲ್ಲಿಸಲು ಸೂಚನೆ ನೀಡಿದಾಗ ಕಾರನ್ನು ಸುಧೀರ್ ಮೇಲೆಯೇ ಹಾಯಿಸಿ ಕೊಲ್ಲುವ ಪ್ರಯತ್ನ ಮಾಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಸ್ಥಳೀಯರನ್ನು ಕಂಡ ಆರೋಪಿ ಸ್ಥಳದಿಂದ ಓಡಿಹೋಗಿದ್ದು, ಕಾರಿನಲ್ಲಿದ್ದ ನನ್ನ ಪತ್ನಿ ನನ್ನನ್ನು ತಡೆದರೆ ಮುಂದೆ ನಿನ್ನನ್ನು ಕೂಡ ಕೊಲ್ಲಿಸದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆಯನ್ನು ಒಡ್ಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ತನ್ನ ಮೇಲಿನ ಆರೋಪವನ್ನು ಯಾದವ್ ತಳ್ಳಿ ಹಾಕಿದ್ದಾರೆ. ನನ್ನ ಏಳಿಗೆಯನ್ನು ಸಹಿಸದೆ ಈ ರೀತಿ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಧೀರ್, ಹರಿಪ್ರಸಾದ್ ಯಾದವ್ ನನಗೆ ದೂರದ ಸಂಬಂಧಿಯಾಗಬೇಕು. ಸಂಬಂಧದಲ್ಲಿ ಅಣ್ಣ. ಅವನು ಈ ರೀತಿಯಾಗಿ ಮಾಡುತ್ತಾನೆ ಅಂದುಕೊಂಡಿರಲಿಲ್ಲ. ನಾನು ಪುತ್ತೂರು ಶಾಸಕರಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷರಲ್ಲಿ ಮನವಿ ಮಾಡಿಕೊಳ್ಳುವುದು ಏನೆಂದರೆ ಬೇರೆಯವರ ಸಂಸಾರದಲ್ಲಿ ಆಟ ಆಡಿದ ಯಾದವ್ ಅವರು ಬಿಜೆಪಿ ಪಕ್ಷಕ್ಕೇ ಕಳಂಕ. ಅಂಥಹವರನ್ನು ಪಕ್ಷದಲ್ಲಿ ಇಟ್ಟುಕೊಳ್ಳಬಾರದು ಎಂದು ತಿಳಿಸಿದ್ದಾರೆ.