ನ್ಯೂಸ್ ನಾಟೌಟ್ : ಹೈದರಾಬಾದ್: ರ್ಯಾಗಿಂಗ್ ಮಾಡಿದ್ದಕ್ಕೆ ಬೇಸತ್ತು ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ದಾರುಣ ಅಂತ್ಯ ಕಂಡಿದ್ದಾಳೆ, ಈ ಘಟನೆ ತೆಲಂಗಾಣ ಫೆ.೨೨ ರಂದು ನಡೆದಿದೆ.
26 ವರ್ಷದ ಡಿ ಪ್ರೀತಿ ಎಂಬ ಮೃತ ವಿದ್ಯಾರ್ಥಿನಿಯನ್ನು ಕಾಕತೀಯ ವೈದ್ಯಕೀಯ ಕಾಲೇಜಿನಲ್ಲಿ ಮೊಹಮ್ಮದ್ ಅಲಿ ಸೈಫ್ ಎನ್ನುವ ಸೀನಿಯರ್ ವಿದ್ಯಾರ್ಥಿ ಪ್ರೀತಿಸುತ್ತೇನೆಂದು ಅವರಿಗೆ ರ್ಯಾಗಿಂಗ್ ಹಾಗೂ ಕಿರುಕುಳ ನೀಡಿದ್ದ ಎನ್ನಲಾಗಿದೆ. ಇದೇ ಕಾರಣದಿಂದ ಮನನೊಂದಿದ್ದ ಪ್ರೀತಿ ಬುಧವಾರ ಫೆ. 22 ರಂದು ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡುವ ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಈ ಘಟನೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಪ್ರೀತಿ ಫೆ. 26 ರಂದು ಭಾನುವಾರ ರಾತ್ರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ದೊರಕಿದೆ.
ಪ್ರೀತಿಯ ತಂದೆ ನೀಡಿದ ದೂರಿನ ಮೇರೆಗೆ ಎರಡನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಮೊಹಮ್ಮದ್ ಅಲಿ ಸೈಫ್ ನನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ರ್ಯಾಗಿಂಗ್ ಮಾಡಿದ ಆರೋಪದಡಿಯಲ್ಲಿ ಬಂಧಿಸಲಾಗಿದೆ. ಈ ಹಿಂದೆ ಮೊಹಮ್ಮದ್ ಅಲಿ ಸೈಫ್ ವಿರುದ್ದ ಕಾಲೇಜು ಹಾಗೂ ಆಸ್ಪತ್ರೆಗೆ ದೂರು ನೀಡಿದ್ದರೂ, ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ.