ನ್ಯೂಸ್ ನಾಟೌಟ್ : ಸುಳ್ಯದ ಹಲವು ಕಡೆ ಹುಚ್ಚು ನಾಯಿ ಹಾಗೂ ಬೀದಿನಾಯಿಗಳ ಕಾಟ ಹೆಚ್ಚುತ್ತಿದೆ. ಈ ಹಿನ್ನಲೆ ಆಟವಾಡಿಕೊಂಡಿದ್ದ ಸಣ್ಣ ಮಗುವಿನ ಮೇಲೆರೆಗಿದ ಬೀದಿ ನಾಯಿ ಮಗುವನ್ನು ಗಾಯಗೊಳಿಸಿದೆ. ಈ ಘಟನೆ ನಡೆದಿದ್ದು ಸುಳ್ಯದ ಕಸಬದ ಬೂಡು ಭಾಗದಲ್ಲಿ .
ಸುಳ್ಯದ ಪರಿಸರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದ್ದು, ಈ ಸಮಸ್ಯೆಯಿಂದ ಜನ ಹೈರಾಣಾಗಿದ್ದಾರೆ.ಚಿಕ್ಕ ಮಕ್ಕಳಂತು ಬೀದಿ ಬದಿಯಲ್ಲಿ ಓಡಾಡುವ ಹಾಗಿಲ್ಲ.ಇದೀಗ ಕಸಬಾ ಬೂಡು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಪುಟ್ಟ ಮಗುವಿನ ಮೇಲೆರಗಿ ಮಗು ಗಾಯಗೊಂಡಿದ್ದು ಈ ಬಗ್ಗೆ ಮಕ್ಕಳ ಪೋಷಕರು ಎಚ್ಚೆತ್ತುಕೊಳ್ಳಬೇಕಾಗಿದೆ.ಪುಟ್ಟ ಮಕ್ಕಳನ್ನು ಅವರ ಪಾಡಿಗೆ ಬಿಡದೇ ಒಂದು ಕಣ್ಣು ನಿಮ್ಮ ಮಕ್ಕಳ ಮೇಲಿಟ್ಟಿರುವುದು ಒಳಿತು.ಬೀದಿ ನಾಯಿಗಳು ಮಲಗಿರುವಾಗ,ತಿನ್ನುತ್ತಿರುವಾಗ ಆದಷ್ಟು ತೊಂದರೆ ಮಾಡದ ಹಾಗೆ ನಿಮ್ಮ ಮಕ್ಕಳಿಗೆ ಮನವರಿಕೆ ಮಾಡಿದರೆ ಅವುಗಳು ಅವುಗಳ ಪಾಡಿಗಿರುವ ಸಾಧ್ಯತೆ ಹೆಚ್ಚಿದೆ.
ಈ ನಿಟ್ಟಿನಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಎಚ್ಚರವಹಿಸಬೇಕೆಂದು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಹಾಗೂ ನಾಮ ನಿರ್ದೇಶಿತ ಸದಸ್ಯ ಬೂಡು ರಾಧಾಕೃಷ್ಣ ರೈ ಅವರು ಕೂಡ ಈ ಮೂಲಕ ವಿನಂತಿಸಿದ್ದಾರೆ.