ನ್ಯೂಸ್ ನಾಟೌಟ್ : ಇಂದಿನಿಂದ ಅಮುಲ್ ಬ್ರ್ಯಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಮತ್ತೆ ಹಾಲಿನ ಬೆಲೆ ಏರಿಕೆ ಮಾಡಿದೆ. ಲೀಟರ್ಗೆ 3 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ದರ ಪರಿಷ್ಕರಣೆಯ ನಂತರ ಅಮುಲ್ ಹಾಲಿನ ಬೆಲೆ ಪ್ರತಿ ಲೀಟರ್ಗೆ 66 ರೂ. ಆಗಿದೆ. ಕಳೆದ 10 ತಿಂಗಳಲ್ಲಿ ಹಾಲಿನ ದರ 12 ರೂಪಾಯಿಯಷ್ಟು ಏರಿಕೆಯಾಗಿದೆ. ಅದಕ್ಕೂ ಮುನ್ನ ಸುಮಾರು ಏಳು ವರ್ಷಗಳ ಕಾಲ ಹಾಲಿನ ದರ ಏರಿಕೆಯಾಗಿರಲಿಲ್ಲ. ಏಪ್ರಿಲ್ 2013 ಮತ್ತು ಮೇ 2014 ರ ನಡುವೆ ಹಾಲಿನ ಬೆಲೆ ಲೀಟರ್ಗೆ 8 ರೂಪಾಯಿಗೆ ಏರಿಕೆಯಾಗಿತ್ತು.
ಅಮುಲ್ ತಾಜಾ 1 ಲೀಟರ್ಗೆ 54 ರೂ. ಹಾಗೂ ಅಮುಲ್ ಎ2 ಎಮ್ಮೆ ಹಾಲಿನ ದರ ಪ್ರತಿ ಲೀಟರ್ಗೆ 70 ರೂ.ಗಳಿಗೆ ಏರಿಕೆ ಕಂಡಿದೆ. ಈ ದರ ಫೆ.3 ರಿಂದಲೇ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.